Kannada NewsKarnataka NewsLatest

ಮಟ್ಕಾ ಅಡ್ಡೆ ಮೇಲೆ ದಾಳಿ: ಬುಕ್ಕಿ ಸೇರಿ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಶಹಾಪುರ ಠಾಣೆ ಪೊಲೀಸರು ಮಟಕಾ ಆಡುತ್ತಿದ್ದವರ ಮೇಲೆ ದಾಳಿ ನಡೆಸಿ ಬುಕ್ಕಿ ಸಮೇತ ಮೂವರನ್ನು ಬಂಧಿಸಿದ್ದಾರೆ.

ಬೆಳಗಾವಿ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರ್ವೆಕರಗಲ್ಲಿ ಭಂಗಿ ಬೋಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವರು  ಓ.ಸಿ/ಮಟಕಾ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ,  ಶಹಾಪೂರ ಪೊಲೀಸ್ ಠಾಣೆಯ ಪಿಐ  ರಾಘವೇಂದ್ರ ಬ ಹವಲ್ದಾರ, ಮತ್ತು  ಸಿಬ್ಬಂದಿಗಳಾದ ಯು. ಟಿ. ಪಾಟೀಲ, ಎಎಸ್‌ಐ. ಎಸ್.ಆರ್.ದೊಡ್ಡನಾಯ್ಕರ, ಎ. ವ್ಹಿ. ನೀಲಪ್ಪನವರ, ಎನ್. ಸಿ. ತುರಮಂದಿ, ಎಮ್. ಎಮ್. ನದಾಫ್, ಎಸ್.ಎಮ್.ಕಾಂಬಳೆ, ಹನಮಂತ ವಿಭೂತಿ, ಎ. ಪಿ. ಖೋತ, ವ್ಹಿ. ಎಲ್. ಬುಶಿ ದಾಳಿ ಮಾಡಿದರು.

Home add -Advt

ಮಟಕಾ ಆಡುತ್ತಿದ್ದ  ವಿಶ್ವನಾಥ ಮ್ಯಾಗಿನಮನಿ (೩೪) (ಹರಿಜನವಾಡಾ, ಶಹಾಪೂರ, ಬೆಳಗಾವಿ), ಕೃಷ್ಣಾ ಉಪರಿ, (೫೮) (ಸಾ|| ಖಾಸಭಾಗ, ಶಹಾಪೂರ, ಬೆಳಗಾವಿ) ಇವರನ್ನು ಬಂಧಿಸಿ ಅವರಿಂದ ಒಟ್ಟು ರೂ.೨೩,೩೬೦/- ಹಣ ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿತರಿಂದ ಓ.ಸಿ ಅಂಕಿ ಸಂಖ್ಯೆ ಚೀಟಿ ಮತ್ತು ಹಣವನ್ನು ತೆಗೆದುಕೊಳ್ಳುವ ಓ.ಸಿ ಬುಕ್ಕಿ ಪ್ರಮೋದ ಧಾಮಣೇಕರ, (ಸಾ|| ಬಾಂದೂರಗಲ್ಲಿ, ಬೆಳಗಾವಿ) ಎನ್ನುವವನನ್ನು ಸಹ ಬಂಧಿಸಿ, ಅವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Related Articles

Back to top button