Kannada NewsKarnataka NewsLatest

ಸಾರ್ವಜನಿಕರ ಗಮನಕ್ಕೆ: ಬೆಳಗಾವಿಯಲ್ಲಿ ಗುರುವಾರ ವಾಹನ ಸಂಚಾರ ಮಾರ್ಗ ಬದಲಾವಣೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –   ಡಾ || ಬಿ.ಆರ್.ಅಂಬೇಡ್ಕರ ಹಾಗೂ ಮಹಾವೀರ ಜಯಂತಿ ಮೆರವಣಿಗೆ ಕಾಲಕ್ಕೆ ಏಪ್ರಿಲ್ 14 ರಂದು ಮುಂಜಾನೆ 8 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಕೆಳಗಿನಂತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರು ಕೋರಿದ್ದಾರೆ.

ಕೊಲ್ಹಾಪೂರ, ನಿಪ್ಪಾಣಿ, ಸಂಕೇಶ್ವರ, ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ, ಗೋವಾ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಜಿನಾಬಾಕುಲ್ ವೃತ್ತ ಹತ್ತಿರ ಬಲತಿರುವ ಪಡೆದುಕೊಂಡು ಬಾಕ್ಸಾಯಿಟ್ ರಸ್ತೆ ಮುಖಾಂತರ ಹಿಂಡಲಗಾ ಗಣೇಶ ಮಂದಿರ, ಗಾಂಧಿ ವೃತ್ತ (ಅರಗನ ತಲಾಬ), ಶೌರ್ಯ ಚೌಕ (ಎಮ್‌ಎಚ್ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.೨, ಶರ್ಕತ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.

Related Articles

ಖಾನಾಪೂರ ಕಡೆಯಿಂದ ಚನ್ನಮ್ಮಾ ವೃತ್ತ ಮೂಲಕ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.೨, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಗಾಂಧಿ ಸರ್ಕಲ್ (ಅರಗನ ತಲಾಬ), ಹಿಂಡಲಗಾ ಗಣೇಶ ಮಂದಿರ, ಬಾಕ್ಸಾಯಿಟ್ ರಸ್ತೆ ಮುಖಾಂತರ ಮುಂದೆ ಸಾಗುವುದು.

ಅನಗೋಳ, ಹಿಂದವಾಡಿ ಕಡೆಯಿಂದ ಚನ್ನಮ್ಮಾ ಸರ್ಕಲ್ ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಆರ್‌ಪಿಡಿ ಸರ್ಕಲ್ ಮೂಲಕ ಅನಗೋಳ ನಾಕಾ ದಿಂದ ೨ನೇ ರೇಲ್ವೆ ಗೇಟ ಕಾಂಗ್ರೇಸ್ ರಸ್ತೆಯ ಮೂಲಕ ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.೨, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಗಾಂಧಿ ಸರ್ಕಲ್ (ಅರಗನ ತಲಾಬ), ಹಿಂಡಲಗಾ ಗಣೇಶ ಮಂದಿರ, ಬಾಕ್ಸಾಯಿಟ್ ರಸ್ತೆ ಮುಖಾಂತರ ಮುಂದೆ ಸಾಗುವುದು.

Home add -Advt

ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಖಡೇಬಜಾರ ರಸ್ತೆ ಮೂಲಕ ಶನಿವಾರ ಖೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಕೇಂದ್ರ ಬಸ್ ನಿಲ್ದಾಣ ಹತ್ತಿರ ಬಲ/ಎಡ ತಿರುವು ಪಡೆದು ಆರ್‌ಟಿಓ ಸರ್ಕಲ್/ಹಳೆ ಪಿಬಿ ರಸ್ತೆ ಮುಖಾಂತರ ಸಾಗುವುದು.

ಸಂಗೊಳ್ಳಿ ರಾಯಣ್ಣ ವೃತ್ತ ಕಡೆಯಿಂದ ರಾಣ ಚನ್ನಮ್ಮ ವೃತ್ತ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ ಹತ್ತಿರ ಬಲತಿರುವು ಪಡೆದುಕಂಡು ಹಳೆ ಪಿಬಿ ರಸ್ತೆ, ಕೃಷ್ಣದೇವರಾಯ (ಕೊಲ್ಹಾಪೂರ) ವೃತ್ತ ಮೂಲಕ ಮುಂದೆ ಸಾಗುವುದು.

ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಕಾಕತಿ ವೇಸ ರಸ್ತೆ, ಶನಿವಾರ ಖೂಟ, ಹುತಾತ್ಮ ಚೌಕ, ಕಿರ್ಲೊಸ್ಕರ ರಸ್ತೆ, ರಾಮದೇವ ಗಲ್ಲಿ ರೋಡ್, ಬೋಗಾರವೇಸ, ರಾಮಲಿಂಗಖಿಂಡ ಗಲ್ಲಿ ರೋಡ್. ಎಸ್‌ಪಿಎಮ್ ರೋಡ್. ಶಹಾಪೂರ ಖಡೇಬಜಾರ ರೋಡ್, ಮುಂಜಾನೆ 8 ಗಂಟೆಯಿಂದ ಎಲ್ಲ ರೀತಿಯ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಪೊಲೀಸ್ ಸಿಬ್ಬಂದಿಗೆ 20 ಸಾವಿರ ವಸತಿಗೃಹಗಳ ನಿರ್ಮಾಣ ; ಶೀಘ್ರದಲ್ಲಿ 950 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ

Related Articles

Back to top button