ಸಿಡ್ನಿ (ಆಸ್ಟ್ರೇಲಿಯಾ) : ಸಿಡ್ನಿಯ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಕರ್ನಾಟಕದ ನಾಲ್ಕು ಜನ ಸ್ವಾಮಿಗಳನ್ನು ಇಲ್ಲಿಯ ವಿಧಾನಸೌಧ ಪ್ರಾಂಗಣಕ್ಕೆ ಸ್ವಾಗತಿಸಿ, ಗೌರವವನ್ನು ಸಮರ್ಪಿಸಿದರು.
ಬಂದಿರುವ ಸ್ವಾಮೀಜಿಗಳ ಮಠಗಳ ಮಾಹಿತಿಯನ್ನು ಪಡೆದು ಸಂತೋಷವನ್ನು ವ್ಯಕ್ತಪಡಿಸಿ, ಅಧಿವೇಶನ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಿಡ್ನಿಯ ಎಲ್ಲಾ ವ್ಯವಸ್ಥೆಯ ಮತ್ತು ಸಿಡ್ನಿ ರಾಜ್ಯದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಮಾಹಿತಿಯನ್ನು ಒದಗಿಸಿದರು.
65,000 ಮಕ್ಕಳಿಗೆ ದೇಶದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕರ್ನಾಟಕದಲ್ಲಿ ಅಕ್ಷರ ದಾಸೋಹ ನೀಡುತ್ತಿರುವ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತವನ್ನು ಆರಂಭಿಸಿ ಅದರ ತಿಳುವಳಿಕೆಯನ್ನು ನೀಡಿದ, ಜೊತೆಜೊತೆಗೆ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಕಾರ್ಯವನ್ನು, ಮಂಡ್ಯ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಅಷ್ಟೇಅಲ್ಲದೇ ಆಯುರ್ವೇದ, ಯೋಗದ ತಿಳುವಳಿಕೆಯನ್ನು ನೀಡುತ್ತಿರುವ ಬೇಬಿ ಮಠದ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳವರ, ಶಿವಗಂಗಾ ಕ್ಷೇತ್ರದಲ್ಲಿ ಅದ್ಭುತವಾದ ಕಾರ್ಯವನ್ನು ನೀಡುತ್ತಿರುವ ಮತ್ತು ಶಿವಗಂಗಾ ಕ್ಷೇತ್ರದ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡಿರುವ ಕ್ಷೇತ್ರದ ರೂವಾರಿಗಳಾದ ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಮತ್ತು ಬೆಂಗಳೂರು ಮಹಾನಗರದಲ್ಲಿ ವೃದ್ಧಾಶ್ರಮ, ಅಷ್ಟೇ ಅಲ್ಲದೆ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ, ಉಚಿತ ಆಸ್ಪತ್ರೆಯನ್ನು ತೆರೆದಿರುವ ಬೆಂಗಳೂರು ವಿಭೂತಿಪೂರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಕಾರ್ಯವನ್ನು ಅವರಿಗೆ ವಿವರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ