Latest

ದೆಹಲಿಯಿಂದ ವಾಪಸ್ ಆದ ಗೃಹ ಸಚಿವರು ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿನ್ನೆ ದಿಢೀರ್ ದೆಹಲಿಗೆ ತೆರಳಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ತಮ್ಮ ದೆಹಲಿ ಭೇಟಿ ಬಗ್ಗೆ ಸ್ವತ: ಗೃಹ ಸಚಿವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ವೈಯಕ್ತಿಕ ಕೆಲಸದ ನಿಮಿತ್ತ ನಾನು ದೆಹಲಿಗೆ ಹೋಗಿದ್ದೆ. ಇಂದು ಬೆಳಿಗ್ಗೆ ವಾಪಸ್ ಆಗಿದ್ದೇನೆ. ದೆಹಲಿಯಲ್ಲಿ ನಾನು ಯಾವ ವರಿಷ್ಠರನ್ನೂ ಭೇಟಿಯಾಗಿಲ್ಲ. ನಾನು ದೆಹಲಿಗೆ ಹೋದಾಗ ಸಿಎಂ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

Home add -Advt

ಸಚಿವ ಸಂಪುಟ ಪುನಾರಚನೆ, ಸಿಎಂ ದೆಹಲಿ ಪ್ರವಾಸ, ಹೈಕಮಾಂಡ್ ಭೇಟಿ ಬೆಳವಣಿಗಳ ನಡುವೆಯೇ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ವರಿಷ್ಠರು ಕರೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ದಿಢೀರ್ ದೆಹಲಿಗೆ ತೆರಳಿದ್ದರು. ಸಚಿವರ ದೆಹಲಿ ಪ್ರವಾಸ ಗೃಹ ಸಚಿವರ ಖಾತೆ ಬದಲಾಗಲಿದೆಯೇ ಎಂಬ ಚರ್ಚೆಗೂ ಗ್ರಾಸವಾಗಿತ್ತು.
ಎಂಬಿಎ ಪದವಿಧರೆ ಆತ್ಮಹತ್ಯೆಗೆ ಶರಣು; ಪ್ರತಿಭಟನೆಗೆ ಮುಂದಾದ ಯುವ ಕಾಂಗ್ರೆಸ್

Related Articles

Back to top button