Kannada NewsKarnataka NewsNationalPolitics

ಷಡ್ಯಂತ್ರ ಮಾಡುತ್ತಿರುವವರು ಯಾರೆಂದು ಈಗ ಹೇಳುವುದಿಲ್ಲ: ಸೂರಜ್ ಕೇಸ್ ಕುರಿತು ರೇವಣ್ಣ ರಿಯಾಕ್ಷನ್  

ಪ್ರಗತಿವಾಹಿನಿ ಸುದ್ದಿ: ಈ ರೀತಿಯ ಷಡ್ಯಂತ್ರಕ್ಕೆ ನಾನು ಹೆದರುವುದಿಲ್ಲ. ಷಡ್ಯಂತ್ರ ಮಾಡುತ್ತಿರುವವರು ಯಾರೆಂದು ಈಗ ಹೇಳುವುದಿಲ್ಲ. ಸಮಯ ಬಂದಾಗ ಸತ್ಯ ಹೊರಬರುತ್ತೆ ಎಂದು ಸೂರಜ್ ಅಸಹಜ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರು ಮೇಲಿಂದ ಮೇಲೆ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ ನಾನು ಇದಕ್ಕೆಲ್ಲ ಹೆದರುವುದಿಲ್ಲ. ಅವರು ಯಾರು ಅಂತ ನನಗೆ ತಿಳಿದಿದೆ, ಸೂಕ್ತ ಸಮಯದಲ್ಲಿ ಹೇಳುತ್ತೇನೆ ಎಂದರು.

Home add -Advt

ಈ ಹಿಂದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇನೆ, ಇದನ್ನು ಎದುರಿಸುವೆ. ನಿಜವಾಗಿ ಏನೇನು ನಡೆದಿದೆ ಎಂದು ಸೂರಜ್ ರೇವಣ್ಣ ಹೇಳಿದ್ದಾನೆ. ಇದರ ಹಿಂದಿರುವ ಕಾಣದ ಕೈಗಳ ಬಗ್ಗೆ ಹೇಳುತ್ತೇನೆ ಎಂದು ರೇವಣ್ಣ ಹೇಳಿದರು.

ಈ ಪ್ರಕರಣದ ತನಿಖೆಯನ್ನೂ ಸಿಐಡಿಯವರು ನಡೆಸಲಿ ಬಿಡಿ ಯಾರು ಬೇಡ ಅಂದಿದ್ದಾರೆ. ನನಗೆ ದೇವರು, ನ್ಯಾಯಾಂಗದ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಸತ್ಯ ಸದ್ಯದಲ್ಲೇ ಗೊತ್ತಾಗುತ್ತೆ ಎಂದು ಹೆಚ್ ಡಿ ರೇವಣ್ಣ ಹೇಳಿದ್ದಾರೆ.

Related Articles

Back to top button