Latest

ಒಂದು ವರ್ಷದ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ…!

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಒಂದು ವರ್ಷದ ಮಗುವನ್ನು ಎತ್ತಿಕೊಂಡು ತಾಯಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ರಾಘಾಪುರದಲ್ಲಿ ನಡೆದಿದೆ.

26 ವರ್ಷದ ಫಕೀರವ್ವ ತನ್ನ ಒಂದು ವರ್ಷದ ಕಂದಮ್ಮ ಶಿವಾನಿ ಜೊತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಹೆರಿಗೆಗಾಗಿ ಫಕೀರವ್ವ ರಾಘಾಪುರದ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಗಂಡನ ಮನೆಯವರು ಇಂದು ಆಕೆಯನ್ನು ಕರೆದುಕೊಂಡು ಹೋಗಲೆಂದು ರಾಘಾಪುರಕ್ಕೆ ಆಗಮಿಸಿದ್ದರು. ಆದರೆ ಫಕೀರವ್ವ ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮಗುವಿನ ಮೃತದೇಹವನ್ನು ಬಾವಿಯಿದ ಹೊರತೆಗೆದಿದ್ದು, ತಾಯಿ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತಿಯನ್ನೇ ಕೊಂದ ಪತ್ನಿ

Related Articles

Back to top button