Karnataka News

*ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕ ಹೃದಯಾಘಾತದಿಂದ ಸಾವು: ತಕ್ಷಣ ಡ್ರೈವರ್ ಸೀಟ್ ನಲ್ಲಿ ಕುಳಿತು ಸಂಭವಿಸಲಿದ್ದ ಅಪಘಾತ ತಪ್ಪಿಸಿದ ಕಂಡಕ್ಟರ್*

ಪ್ರಗತಿವಾಹಿನಿ ಸುದ್ದಿ: ಬಿಎಂಟಿಸಿ ಬಸ್ ಡ್ರೈವ್ ಮಾಡುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತದಿಂದ ಸಾವನ್ನಪಿದ್ದು, ಬಸ್ ಅಡ್ಡಾದಿಡ್ದಿ ಓಡುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಕಂಡಕ್ಟರ್ ತಕ್ಷಣ ಡ್ರೈವರ್ ಸೀಟ್ ನಲ್ಲಿ ಕುಳಿತು ಬಸ್ ನಿಯಂತ್ರಣಕ್ಕೆ ತಂದು ನಿಲ್ಲಿಸಿರುವ ಘಟನೆ ಬೆಂಗಳೂರಿನ ನೆಲಮಂಗಲ ಟೌನ್ ನಲ್ಲಿ ನಡೆದಿದೆ.

ಕಿರಣ್ ಕುಮಾರ್ (40) ಮೃತ ಚಾಲಕ. ಬಿನ್ನಿಮಂಗಲ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಚಲಾಯಿಸುತ್ತಿದ್ದ ಕಿರಣ್ ಕುಮಾರ್ ಗೆ ಏಕಾಏಕಿ ಹೃದಯಾಘಾತವಾಗಿದೆ. ಡ್ರೈವರ್ ಸೀಟ್ ನಲ್ಲಿಯೇ ಕುಸಿದು ಕೆಳಗೆ ಬಿದ್ದಾರೆ. ಬಸ್ ಅಡ್ಡಾದಿಡ್ಡಿಯಾಗಿ ವೇಗವಾಗಿ ಚಲೈಸಲಾರಂಭಿಸಿದ್ದಲ್ಲದೇ ಮುಂದೆ ಹೋಗುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ತಕ್ಷಣ ನಿರ್ವಾಹಕ ಡ್ರೈವರ್ ಸೀಟ್ ನಲ್ಲಿ ಹಾರಿ ಕುಳಿತು ಬಸ್ ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾರೆ. ಅಷ್ಟರಲ್ಲೇ ಬಸ್ ಚಾಲಕ ಕಿರಣ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Home add -Advt

ಆದರೆ ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಿಲ್ಲಿಸುತ್ತಿದ್ದಂತೆ ಕಿರಣ್ ಕುಮಾರ್ ಅವರನ್ನು ನಿರ್ವಾಹಕ ಓಬಳೇಶ್, ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ಅಷ್ಟರಲ್ಲೇ ಕಿರಣ್ ಕುಮಾರ್ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.


Related Articles

Back to top button