Kannada NewsKarnataka NewsLatest
*ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ಕ್ಷಣದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಟೋ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.
53 ವರ್ಷದ ತಿಮ್ಮೇಶ್ ಮೃತ ಚಾಲಕ. ಇಂದು ಬೆಳಿಗ್ಗೆ ತಿಮ್ಮೇಶ್, ಸಂಪಂಗಿರಾಮನಗರದ ಚಾಮುಂಡಿ ಟೀ ಅಂಗಡಿ ಬಳಿ ಆಟೋ ಚಲಾಯಿಸಿಕೊಂಡು ಬಂದಿದ್ದಾರೆ. ಟೀ ಕುಡಿಯಲೆಂದು ಅಂಗಡಿ ಬಳಿ ಆಟೋ ನಿಲ್ಲಿಸಿದ್ದಾರೆ. ಆಟೋದಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆ ಒತ್ತಿ ಹಿಡಿದು, ಉಜ್ಜಿಕೊಳ್ಳುತ್ತಲೇ ಟೀ ಅಂಗಡಿ ಬಳಿ ಬಂದ ಚಾಲಕ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಹೃದಯ ವಿದ್ರಾವಕ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆನ್ನುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.




