Kannada NewsKarnataka NewsLatest

ಅಯೋಧ್ಯೆ ತೀರ್ಪು : ಶಂಕರಗೌಡ, ಬಾಲಚಂದ್ರ, ಅಭಯ್, ಬೆನಕೆ ಸ್ವಾಗತ

https://www.youtube.com/watch?v=RM8HH_FjRoo

https://www.youtube.com/watch?v=rFaC5bP4lTM

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ/ ಗೋಕಾಕ : ಶತಮಾನಕ್ಕೂ ಹೆಚ್ಚು ವರ್ಷ ಹಳೆಯದಾದ ಹಾಗೂ   ಅಯೋಧ್ಯೆಯ ರಾಮ ಜನ್ಮಭೂಮಿಯ ವಿವಾದಕ್ಕೆ ಸಂಬಂಧಪಟ್ಟಂತೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಸ್ವಾಗತಿಸಿದ್ದಾರೆ.
ಈ ಕುರಿತು ಪ್ರತ್ಯೇಕ ಹೇಳಿಕೆ ನೀಡಿರುವ ಅವರು, ವಿವಾದಿತ ಜಾಗೆಯನ್ನು ಹಿಂದೂಗಳಿಗೆ ನೀಡಲು ಆದೇಶ ನೀಡಿರುವುದು ಹಾಗೂ ಸುನ್ನಿ ವಕ್ಫ್ ಕಮೀಟಿಗೆ ೫ ಎಕರೆ ಜಾಗೆ ನೀಡುವಂತೆ ತೀರ್ಪು ಹೊರಡಿಸಿರುವುದು ಐತಿಹಾಸಿಕವಾಗಿದೆ. ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕಾಗಿದೆ. ಸುಪ್ರೀಂ ಕೋರ್ಟ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿ ೧೩೪ ವರ್ಷಗಳ ಹಳೆಯದಾದ ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಅಂತ್ಯ ಹಾಡಿರುವುದು ಸ್ವಾಗತಾರ್ಹ ನಿಲುವು. ಎಲ್ಲರೂ ಸುಪ್ರಿಂ ಕೋರ್ಟ್ ತೀರ್ಪಿಗೆ ಬದ್ಧರಾಗಿರಬೇಕು ಎಂದು ವಿನಂತಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button