Karnataka NewsLatestPolitics

*ಆಡಿಯೋ ಪ್ರಕರಣ: ಲೋಕಾಯುಕ್ತಕ್ಕೆ ದೂರು*

ಪ್ರಗತಿವಾಹಿನಿ ಸುದ್ದಿ: ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ಬಿ.ಆರ್.ಪಾಟಿಲ್ ಮಾಡಿರುವ ಭ್ರಷ್ಟಾಚಾರ ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಗಿದೆ. ವಸತಿ ಯೋಜನೆಯಡಿ ಹಣ ಕೊಟ್ಟವರಿಗೆ ಮನೆ ಎಂದು ಹೇಳುವ ಮೂಲಕ ವಸತಿ ಇಲಾಖೆಯ ಲಂಚಾವತಾರವನ್ನು ಬಯಲಿಗೆಳೆದಿದ್ದಾರೆ. ಇದು ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ಪ್ರಹಾರಕ್ಕೆ ಮತ್ತೊಂದು ಅಸ್ತ್ರವಾಗಿದೆ.

ಈ ನಡುವೆ ಬಿ.ಆರ್.ಪಾಟೀಲ್ ವಸತಿ ಸಚಿವ ಜಮಿರ್ ಅಹ್ಮದ್ ಆಪ್ತ ಕಾರ್ಯದರ್ಶಿ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ಬಗ್ಗೆ ಲೊಕಾಯುಕ್ತಕ್ಕೆ ದೂರು ನೀಡಲಾಗಿದೆ.

Home add -Advt

ನೈಜ ಹೋರಾಟಗಾರರ ವೇದಿಕೆ ಅಧ್ಯಕ್ಷ ವೆಂಕಟೇಶ್, ಲೋಕಾಯುಕ್ತಕ್ಕೆ ದೂರು ನೀಡಿದ್ದು, ಬಿ.ಆರ್.ಪಾಟೀಲ್ ಆಡಿಯೋ ಸಂಭಾಷಣೆ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.


Related Articles

Back to top button