ಹೆಚ್ ಡಿಕೆಗೆ ಪಾಕಿಸ್ತಾನದ ಮೇಲೆ ಪ್ರೀತಿ ಹೆಚ್ಚಾಗಿದೆ: ಸಚಿವ ಶ್ರೀರಾಮುಲು

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಹೆಚ್ಚಾಗಿದೆ. ಹಾಗಾಗಿ ಅವರು ದೇಶ ಬಿಟ್ಟು ತೊಲಗಲಿ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾದಿದ ಶ್ರೀರಾಮುಲು, ’ಭೂಪಟದಲ್ಲಿ ಪಾಕಿಸ್ತಾನ ಇಲ್ಲದಿದ್ದರೆ ಬಿಜೆಪಿಗೆ ವೋಟ್ ಬೀಳುತ್ತಿರಲಿಲ್ಲ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿಯವರಿಗೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಪ್ರೀತಿ ಹೆಚ್ಚಾಗಿದೆ. ಅವರು ದೇಶಬಿಟ್ಟು ತೊಲಗಲಿ. ಮಾಜಿ ಪ್ರಧಾನಿ ಮಗನಾಗಿ, ಓರ್ವ ಸಿಎಂ ಕೂಡ ಆಗಿದ್ದವರು ಇಂತಹ ದೇಶ ಒಡೆಯುವ ಷಡ್ಯಂತ್ರಕ್ಕೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಅವರು ಯಾರಿಗೂ ಬೇಡವಾದವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಡೆತ್ ಆಗಿರುವ ಪಾರ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಮಂಗಳೂರು ಬಾಂಬ್ ಪತ್ತೆ ಪ್ರಕರಣ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಬಾಂಬ್ ಸಿಕ್ಕಿರುವುದು ಗಂಭೀರ ವಿಚಾರ, ಯಾವುದೇ ರಾಜಕಾರಣಿಗಳು ಇದನ್ನ ಗಂಭೀರವಾಗಿ ಯೋಚನೆ ಮಾಡಬೇಕು. ಕುಮಾರಸ್ವಾಮಿಯವರನ್ನು ಯಾವತ್ತೂ ಸಿರಿಯಸ್ ಪೊಲಿಟಿಷಿಯನ್ ಎಂದುಕೊಂಡಿಲ್ಲ, ಹಿಂದೆ ಸೈನಿಕರು ಹೊಟ್ಟೆ ಪಾಡಿಗೆ ಸೇನೆ ಸೇರುತ್ತಾರೆ ಎಂದು ಹೇಳಿದ್ದರು. ಈಗ ಬಾಂಬ್ ವಿಚಾರವಾಗಿ ಕೂಡಾ ತಮಾಷೆಯಾಗಿ ಮಾತನಾಡಿದ್ದಾರೆ. ಮಾನಸಿಕ ಸ್ಥಿತಿ ಕಳೆದುಕೊಂಡ ನಂತರ ಈ ರೀತಿ ಮಾತನಾಡುತ್ತಾರೆ ಎಂದು ಗುಡುಗಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button