*ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದೆ ಇಡಲು ಜನಾಕ್ರೋಶ ಯಾತ್ರೆ: ಬಿ.ವೈ. ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂರು ಹಂತದಲ್ಲಿ ಜನಾಕ್ರೋಶ ಆಯೋಜನೆ ಮಾಡಿದ್ದೇವೆ. ಮೊದಲ ಹಂತದ ಜನಾಕ್ರೋಶ ಯಾತ್ರೆ ಮೈಸೂರು, ಹಾಸನ ಮಂಡ್ಯದಿಂದ ಪ್ರಾರಂಭವಾಗಿ ಮೂರನೇ ಹಂತದ ಯಾತ್ರೆ ಬೆಳಗಾವಿಯಲ್ಲಿ ಪ್ರಾರಂಭ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡದ ಅವರು, ಬೆಲೆ ಏರಿಕೆ ಪರಿಣಾಮ ಜನರು ರೋಸಿಹೋಗಿದ್ದಾರೆ. ಜನಾಕ್ರೋಶ ಯಾತ್ರೆ ದಿಕ್ಕು ಬದಲಿಸಲು ನಾಳೆ ಕಾಂಗ್ರೆಸ್ ಹೋರಾಟ ಮಾಡ್ತಿದೆ. ನಿಮ್ಮ ಮಂತ್ರಿಮಂಡಲದ ಸದಸ್ಯರು ಹಳ್ಳಿಗಳಿಗೆ ಬಂದು ಬೆಲೆ ಏರಿಕೆ ಪರಿಣಣಮವನ್ನು ಆಲಿಸಬೇಕು. ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜನಾಕ್ರೋಶ ಯಾತ್ರೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತಿದ್ದೇವೆ
ಗ್ಯಾರಂಟಿಗಳಿಂದ ರಾಜ್ಯದಲ್ಲಿ ಸಮೃದ್ಧವಾಗಿದೆ ಎಂದು ಸಿಎಂ ಹೇಳ್ತಾರೆ. ಶಾಸಕರಿಗೆ ಅನುದಾನ ಕೊಡದೇ ಇದ್ರೂ ನಡೆಯುತ್ತೆ ಮನೋಭಾವ ಬಂದಿದೆ. ಅನುದಾನ ಕೊಡಿ ಎಂದರೆ ಗ್ಯಾರಂಟಿ ಕೊಟ್ಟಿದ್ದೇವಿ ಅಂತಿದ್ದಾರೆ. ಪೆಟ್ರೋಲ್, ಹಾಲು, ನೀರು ಸೇರಿ 50 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಲಾರಿ ಮುಷ್ಕರ ಸೇರಿ ಅನೇಕ ಮುಷ್ಕರ ಆಗುತ್ತಿವೆ. ಸರ್ಕಾರದ ಬಂದು 20 ತಿಂಗಳಲ್ಲಿಯೇ ಜನಪ್ರಿಯತೆ ಕಳೆದುಕೊಂಡಿದೆ ಎಂದರು.
ಜನಾಕ್ರೋಶ ಯಾತ್ರೆಗೆ ಬರುವಂತೆ ರಮೇಶ್ ಜಾರಕಿಹೊಳಿಗೆ ಪೋನ್ ಮಾಡಿದ್ದೆ. ಬಿಜೆಜೆಪಿ ಜನಾಕ್ರೋಶ ಯಾತ್ರೆಗೆ ರಮೇಶ್ ಜಾರಕಿಹೊಳಿ ಬರ್ತಾರೆ ಅನೋ ನಿರೀಕ್ಷೆಯಲ್ಲಿ ಇದ್ದೇನೆ ಎಂದರು.
ನಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಕಾನೂನುಗಿಂತ ಯಾರು ದೊಡ್ಡವರಿಲ್ಲ, ಮಾಡಿದ್ದನ್ನು ಅನುಭವಿಸಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು ಎಂದರು.