Latest

ಬಿ.ಎಸ್.ವೈ ರಾಜಕೀಯ ನಿವೃತ್ತಿ? ಏನಂದ್ರು ಬಿ.ವೈ.ವಿಜಯೇಂದ್ರ?

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ತಮ್ಮ ಸ್ವಕ್ಷೇತ್ರವನ್ನು ಮಗ ಬಿ.ವೈ.ವಿಜಯೇಂದ್ರಗೆ ಬಿಟ್ಟು ಕೊಡುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯವಾಗಿ ಇಂದು ಮಹತ್ವದ ಘೋಷಣೆ ಮಾಡಿದ್ದು, ಸ್ವಕ್ಷೇತ್ರ ಶಿಕಾರಿಪುರದಿಂದ ಮಗ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ. ಶಿಕಾರಿಪುರ ಕ್ಷೇತ್ರವನ್ನು ತಾವು ಖಾಲಿ ಮಾಡುತ್ತಿರುವುದರಿಂದ ಕ್ಷೇತ್ರ ತೆರವಾಗುತ್ತಿದೆ ಹಾಗಾಗಿ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ. ಮೈಸೂರು ಭಾಗದಿಂದ ಸ್ಪರ್ಧಿಸಿವಂತೆ ವಿಜಯೇಂದ್ರಗೆ ಒತ್ತಾಯವಿದೆ ಆದರೂ ಶಿಕಾರಿಪುರ ಕ್ಷೇತ್ರವನ್ನು ನಾನು ಬಿಟ್ಟುಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಯಡಿಯೂರಪ್ಪ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿ.ವೈ.ವಿಜಯೇಂದ್ರ, ನಿವೃತ್ತಿ ಎಂಬುದು ಯಡಿಯೂರಪ್ಪನವರ ಡಿಕ್ಷನರಿಯಲ್ಲಿಯೇ ಇಲ್ಲ. ಅವರಿಗೆ ನಿವೃತ್ತಿ ಎಂಬುದು ಸಂಬಂಧಪಡಲ್ಲ, ಈ ಹಿಂದೆಯೂ ಪಕ್ಷವನ್ನು ಬಲಪಡಿಸಿದ್ದರು. ಇನ್ಮುಂದೆಯೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಬಲಪಡಿಸುತಾರೆ. ದೇವರು ಎಲ್ಲಿಯವರೆಗೆ ಶಕ್ತಿ ಕೊಡುತ್ತಾರೋ ಅಲ್ಲಿಯವರೆಗೂ ದುಡಿಯುತ್ತಾರೆ. ಸಕ್ರಿಯ ರಾಜಕಾರಣದಿಂದ ಹಿಂದೆಸರಿಯಲ್ಲ ಎಂದು ಹೇಳಿದ್ದಾರೆ.

ಪಕ್ಷ ಹಾಗೂ ತಂದೆ ತೆಗೆದುಕೊಂಡ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಕ್ಷೇತ್ರದ ಜನರ ಒತ್ತಾಸೆಯಂತೆ ಅವರು ತೀರ್ಮಾನ ಮಾಡಿದ್ದಾರೆ. ತಂದೆಯ ಮಾರ್ಗದರ್ಶನ, ವರಿಷ್ಠರ ಮಾತಿನಂತೆ ನಡೆದುಕೊಳ್ಳುತ್ತೇನೆ. ಶಿಕಾರಿಪುರ ಅಲ್ಲರಾಜ್ಯದ ಯಾವುದೇ ಕ್ಷೇತ್ರ ಕೊಟ್ಟರು ಸ್ಪರ್ಧಿಸಲು ನಾನು ಸಿದ್ಧನಿದ್ದೆ. ಈಗಲೂ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಪಕ್ಷ ಸಂಘಟನೆ ಮಾಡುತ್ತೇನೆ. ತಂದೆಯ ನಡೆಯಲ್ಲಿ ಸ್ಪಷ್ಟತೆ ಇದೆ ಯಾವತ್ತೂ ಗೊಂದಲಗಳಿಲ್ಲ ಎಂದು ತಿಳಿಸಿದರು.
ಕೊನೆಗೂ ಬಿ.ವೈ.ವಿಜಯೇಂದ್ರ ಕ್ಷೇತ್ರ ನಿರ್ಧಾರ; ಯಡಿಯೂರಪ್ಪ-ವಿಜಯೇಂದ್ರ ಜಂಟಿ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button