*ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ; ತಂದೆಯನ್ನೇ ಕೊಲೆಗೈದು, ದೇಹವನ್ನು 30 ತುಂಡುಗಳನ್ನಾಗಿ ಕತ್ತರಿಸಿ ಬಿಸಾಕಿದ್ದ ಮಗ*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಘಟನೆ ಮಾಸುವ ಮುನ್ನವೇ ಅದನ್ನೂ ಮೀರಿಸುವಂತಹ ಪ್ರಕರಣವೊಂದು ರಾಜ್ಯದಲ್ಲಿ ನಡೆದಿದೆ. ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಮಗ, ಮೃತದೇಹವನ್ನು 30 ತುಂಡುಗಳನ್ನಾಗಿ ಕತ್ತರಿಸಿ ಕೊಳವೆ ಬಾವಿಗೆ ಬಿಸಾಕಿದ್ದ ಭಯಂಕರ ಘಟನೆ ಬಾಗಲಕೋಟೆ ಜಿಲ್ಲೆಯ ಮುದೋಳ ಹೊರವಲಯದ ಮಂಟಿಯೂರ್ ಬೈಪಾಸ್ ಬಳಿ ನಡೆದಿದೆ.
ಪರಶುರಾಮ್ ಕುಳಲಿ (54) ಮಗನಿಂದಲೇ ಹತ್ಯೆಯಾದ ತಂದೆ. ವಿಠಲ್ ಕುಳಲಿ ತಂದೆಯನ್ನೇ ತುಂಡು ತುಂಡನ್ನಾಗಿ ಕತ್ತರಿಸಿದ ಮಗ. ರಾಡ್ ನಿಂದ ಹೊಡೆದು ತಂದೆಯನ್ನು ಕೊಲೆಗೈದು ಬಳಿಕ ದೇಹದ ಭಾಗಗಳನ್ನು 30 ತುಂಡುಗಳನ್ನಾಗಿ ಕತ್ತರಿಸಿ ಬಿಸಾಕಿದ್ದ.
ಮೂರು ದಿನದ ಬಳಿಕ ತಂದೆ ಹತ್ಯೆ ಮಾಡಿದ್ದಾಗಿ ಮನೆಯವರ ಬಳಿ ಹೇಳಿದ್ದಾನೆ. ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ಮುಧೋಳ ಪೊಲೀಸರು ಆರೋಪಿ ಮಗ ವಿಠಲ್ ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ತಂದೆ ಪರಶುರಾಮ್ ಕುಳಲಿ ಪ್ರತಿದಿನ ಕುಡಿದು ಬಂದು ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತು ರೋಸಿಹೋಗಿದ್ದ ಮಗ ವಿಠಲ್, ಅಂತಿಮವಾಗಿ ತಂದೆಯನ್ನೇ ಕೊಲೆ ಮಾಡಲು ನಿರ್ಧರಿಸಿದ್ದಾನೆ. ಕೊಲೆ ಬಳಿಕ ಮೃತದೇಹವನ್ನು ಕೊಡಲಿಯಿಂದ ಕಡಿದು 30 ತುಂಡುಗಳನ್ನಾಗಿ ಕತ್ತರಿಸಿ, ತಮ್ಮದೇ ಹೊಲದಲ್ಲಿದ್ದ ಕೊಳವೆ ಬಾವಿಗೆ ದೇಹದ ತುಂಡುಗಳನ್ನು ಹಾಕಿದ್ದಾನೆ. ವಿಚಾರಣೆ ವೇಳೆ ಆರೋಪಿ ವಿಠಲ್ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ಮುಂದುವರೆದಿದೆ.
*ಪ್ರಧಾನಿ ಮೋದಿ ಹತ್ಯೆ ಮಾತನಾಡಿದ್ದ ಕಾಂಗ್ರೆಸ್ ನಾಯಕನ ಬಂಧನ*
https://pragati.taskdun.com/congress-leader-raja-pateriaarrestcontroversial-statementpm-narendra-modi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ