Latest

ಯುವತಿ ಮನೆ ಕಪಾಟಲ್ಲಿ ಪ್ರತ್ಯಕ್ಷವಾದ ಬಜರಂಗ ದಳ ಕಾರ್ಯಕರ್ತ !; ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಹೊಸ ತಿರುವು

ಪ್ರಗತಿವಾಹಿನಿ ಸುದ್ದಿ, ಮೂಡಿಗೆರೆ: ಪಿರಿಯಾಪಟ್ಟಣದ ಬಸಲಾಪುರ ಶಾಲಾ ಸ್ವಚ್ಛತೆ ವೇಳೆ ನಾಗರ ಹಾವೊಂದು ಕಪಾಟಿನಲ್ಲಿ ಅವಿತು ಕುಳಿತು ಭುಸುಗುಟ್ಟ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಚಿತ್ರ ಕಂಡವರೆಲ್ಲ ಅಬ್ಬಬ್ಬಾ..! ಎಂದಿದ್ದಾರೆ.

ಇದರ ಬೆನ್ನಿಗೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಮುಸ್ಲಿಂ ಯುವತಿಯೊಬ್ಬಳ ಮನೆಯ ಕಪಾಟಿನಲ್ಲಿ ಬಜರಂಗದಳದ ಕಾರ್ಯಕರ್ತನೊಬ್ಬ ಪ್ರತ್ಯಕ್ಷವಾಗಿರುವ ವಿಡಿಯೊ ವೈರಲ್ ಆಗಿದೆ !

ಈ ಮೂಲಕ ಇತ್ತೀಚೆಗೆ ಗ್ರಾಮದಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಮುಸ್ಲಿಂ ಯುವತಿ ಜೊತೆ ಸ್ನೇಹ ಬೆಳೆಸಿದ್ದ ಬಜರಂಗದಳ, ಬಿಜೆಪಿ ಕಾರ್ಯಕರ್ತ ಅಜಿತ್ ಮೇಲೆ ಹಲ್ಲೆ ನಡೆದಿತ್ತು. ಯುವತಿ ಸಮುದಾಯದವರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಅಜಿತ್ ದೂರು ನೀಡಿದ್ದರು.

ಆದರೆ ಇದೀಗ ವಿಡಿಯೊ ತುಣುಕೊಂದು ವೈರಲ್ ಆಗಿದ್ದು ಅಜಿತ್ ಯುವತಿಯ ಮನೆಯ ಕಪಾಟಿನಲ್ಲಿ ಅಡಗಿ ಕೂತಿದ್ದ ಎಂಬುದು ಬಹಿರಂಗವಾಗಿದೆ. ಅಜಿತ್ ತಮ್ಮಮನೆಯ ಕಪಾಟಿನಲ್ಲಿ ಅಡಗಿ ಕೂತಿದ್ದರು ಎಂದು ಯುವತಿ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಹಲ್ಲೆಗೊಳಗಾಗಿದ್ದ ಅಜಿತ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Home add -Advt
https://pragati.taskdun.com/be-careful-when-cleaning-schools-cobra-found-in-basalpur-school/
https://pragati.taskdun.com/sexual-harassmentteachermanjunathbail-plea-dismiss/
https://pragati.taskdun.com/gold-and-silver-prices-continue-to-fluctuate-again/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button