Uncategorized

*ನೂತನ ಸಚಿವರಾಗಿ ಹೆಚ್.ಕೆ.ಪಾಟೀಲ್,ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ ಸೇರಿದಂತೆ 24 ಸಚಿವರ ಪ್ರಮಾಣವಚನ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ 24 ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದಲ್ಲಿ ಅದ್ದೂರಿಯಾಗಿ ನಡೆದಿದೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ನೂತನ ಸಚಿವರಾಗಿ ಹೆಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ, ಪಿರಿಯಾಪಟ್ಟಣ ವೆಂಕಟೇಶ್, ಡಾ.ಹೆಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪೂರ, ಶಿವಾನಂದಪಾಟೀಲ್, ಎಸ್ ಎಸ್ ಮಲ್ಲಿಕಾರ್ಜುನ, ಶಿವರಾಜ್ ತಂಗಡಗಿ, ಡಾ.ಶರಣಪ್ರಕಾಶ್ ಪಾಟೀಲ್, ಮಂಕಾಳು ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ಸೇರಿದಂತೆ 24 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

Home add -Advt

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಕಾಂಗ್ರೆಸ್ ಶಾಸಕರು, ನೂತನ ಸಚಿವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ನೂತನ ಸಚಿವರ ಪಟ್ಟಿ:

ಹೆಚ್.ಕೆ.ಪಾಟೀಲ್
ಕೃಷ್ಣಬೈರೇಗೌಡ
ಚಲುವರಾಯಸ್ವಾಮಿ
ಪಿರಿಯಾಪಟ್ಟಣ ವೆಂಕಟೇಶ್
ಡಾ.ಹೆಚ್.ಸಿ.ಮಹದೇವಪ್ಪ
ಈಶ್ವರ ಖಂಡ್ರೆ
ಕೆ.ಎನ್.ರಾಜಣ್ಣ
ದಿನೇಶ್ ಗುಂಡೂರಾವ್
ಶರಣಬಸಪ್ಪ ದರ್ಶನಾಪೂರ
ಶಿವಾನಂದಪಾಟೀಲ್
ಆರ್.ಬಿ.ತಿಮ್ಮಾಪುರ
ಎಸ್.ಎಸ್.ಮಲ್ಲಿಕಾರ್ಜುನ
ಶಿವರಾಜ್ ತಂಗಡಗಿ
ಡಾ.ಶರಣಪ್ರಕಾಶ್ ಪಾಟೀಲ್
ಮಂಕಾಳು ವೈದ್ಯ
ಲಕ್ಷ್ಮೀ ಹೆಬ್ಬಾಳ್ಕರ್
ರಹಿಂ ಖಾನ್
ಡಿ.ಸುಧಾಕರ್
ಸಂತೋಷ್ ಲಾಡ್
ಬೋಸರಾಜು
ಬಿ.ಎಸ್.ಸುರೇಶ್
ಮಧು ಬಂಗಾರಪ್ಪ
ಎಂ.ಸಿ.ಸುಧಾಕರ್
ಬಿ.ನಾಗೇಂದ್ರ

https://pragati.taskdun.com/24-new-ministersoathcongress-govt/

Related Articles

Back to top button