Belagavi NewsBelgaum NewsKannada NewsKarnataka NewsLatest

*ಮಂಗಳವಾರ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗಳ ಪ್ರದಾನ:* *ಅಕಾಡೆಮಿಗೆ ಹೊಸ ಸ್ವರೂಪ ನೀಡಿದ ಸಂಗಮೇಶ ಬಬಲೇಶ್ವರ*

ಬೆಳಗಾವಿ ಸುವರ್ಣಸೌಧದಲ್ಲಿ ಡಿ.16 ರಂದು ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳ ಪ್ರಧಾನ ಸಮಾರಂಭ; 2 ಕೋಟಿ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ಬಾಲವಿಕಾಸ ಅಕಾಡೆಮಿ -ಅಧ್ಯಕ್ಷ ಸಂಗಮೇಶ ಬಬಲೇಶ್ವರ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾರ್ಗದರ್ಶನದಲ್ಲಿ ಅಕಾಡೆಮಿಗೆ ಹೊಸಸ್ವರೂಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು, 2022-23 ಹಾಗೂ 2023-24 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ವಿತರಿಸಲಾಗುತ್ತಿದೆ.

ಕರ್ನಾಟಕ ಬಾಲವಿಕಾಸ ಅಕಾಡೆಮಿಯು ರಾಜ್ಯದ ಸುಮಾರು 2 ಕೋಟಿ ಮಕ್ಕಳ ಶ್ರಯೋಭಿವೃದ್ಧಿಗಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2022-23 ಮತ್ತು 2023-24 ಸಾಲಿನ ಗೌರವ ಪ್ರಶಸ್ತಿ, ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಬಾಲ ಗೌರವ ಪ್ರಶಸ್ತಿ ಹಾಗೂ ವಿಶೇಷ ಗೌರವ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಆಯ್ಕೆ ಮಾಡಿರುವ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದಾರೆ.

ಈ ಪ್ರಶಸ್ತಿಗಳು ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆಯಾಗಲಿವೆ. ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳನ್ನು ಗೌರವಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು ಅಕಾಡೆಮಿಯ ಜವಾಬ್ದಾರಿ. ಈ ಪ್ರಶಸ್ತಿಗಳನ್ನು ಗಣ್ಯರ ಮೂಲಕವೇ ಕೊಡಿಸಬೇಕೆಂಬ ಮಹದಾಸೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಪ್ರಶಸ್ತಿ ನೀಡಿ, ಗೌರವ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಧಾರವಾಡ ಬಾಲ ವಿಕಾಸ ಅಕಾಡೆಮಿ ವತಿಯಿಂದ ಕೊಡ ಮಾಡುವ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ, ಲೇಖಕರು, ಸಂಘ-ಸಂಸ್ಥೆಗಳಿಗೆ 25 ಸಾವಿರ ನಗದು ಬಹುಮಾನ, ಮಕ್ಕಳ ಚಂದಿರ ಪ್ರಶಸ್ತಿಗೆ ಆಯ್ಕೆಯಾದ ಲೇಖಕರಿಗೆ 15 ಸಾವಿರ ನಗದು ಬಹುಮಾನ ಹಾಗೂ ಅಕಾಡೆಮಿ ಬಾಲ ಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ 10 ಸಾವಿರ ನಗದು ಬಹುಮಾನ, ವಿಶೇಷ ಗೌರವ ಪ್ರಶಸ್ತಿ ಪುರಸ್ಕೃತರಿಗೆ 10 ಸಾವಿರ ನಗದು ಬಹುಮಾನವನ್ನು ವಿತರಿಸಿ ಗೌರವಿಸಲಾಗುತ್ತದೆ ಎಂದು ಅವರು ಹೇಳಿದರು.

2022 ನೇ ಸಾಲಿನ ಮಕ್ಕಳ ಚಂದಿರ ಪ್ರಶಸ್ತಿಗೆ ಆಯ್ಕೆಯಾದ ಲೇಖಕ ಪುಸ್ತಕ:

ಮೈಸೂರಿನ ಕೊಳ್ಳೆಗಾಲ ಶರ್ಮಾ ಅವರ ಗುಬ್ಬಿಯ ಬ್ರಹ್ಮಾಸ್ತ್ರ ಪುಸ್ತಕ, ವಿಜಯಪೂರದ ಎಸ್. ಎಸ್ ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಪುಸ್ತಕ, ಬೆಂಗಳೂರಿನ ಡಾ. ಬೇಲೂರ ರಘುನಂದನ ಅವರ ಚಿಟ್ಟೆ ಪುಸ್ತಕ, ವಿಜಯಪೂರನ ಹ.ಮ. ಪೂಜಾರ ಅವರ ಅಜ್ಜನ ಮನೆಯ ಅಂಗಳದಲ್ಲಿ ಪುಸ್ತಕ, ಬಾಗಲಕೋಟಯ ಡಾ. ಕರವೀರ ಪ್ರಭು ಕ್ಯಾಲಕೊಂಡ ಅವರ ಮಗುವಿಗೆ ಲಸಿಕೆ ಕೊಡಿಸಿದ್ದೀರಾ? ಪುಸ್ತಕಗಳ 2022 ನೇ ಸಾಲಿನ ಮಕ್ಕಳ ಚಂದಿರ ಪ್ರಶಸ್ತಿಗೆ ಆಯ್ಕೆಯಾಗಿವೆ.

2023 ನೇ ಸಾಲಗೆ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಲೇಖಕ ಪುಸ್ತಕ:

ದಕ್ಷಿಣ ಕನ್ನಡದ ನಿರ್ಮಲಾ ಸುರತ್ಕಲ್ ಅವರ ಪುಟ್ಟಿಗೆ ಸಿಟ್ಟಿಲ್ಲ ಪುಸ್ತಕ, ಧಾರವಾಡದ ಲಲಿತಾ ಪಾಟೀಲ ಅವರ ಗಪ್ ಚುಪ್ ಪುಸ್ತಕ. ಹಾವೇರಿಯ ಮಾಲತೇಶ ಅಂಗೂರ ಅವರ ಕಾಡು-ಮೇಡು ಪುಸ್ತಕ ಹಾಗೂ ನಾಗರಾಜ ಹುಡೇದ ಬೆರಗು ಪುಸ್ತಕಗಳಿಗೆ 2023 ನೇ ಸಾಲಿನ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಲಭಿಸಿದೆ.

2022-23ನೇ ಸಾಲಗೆ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ:

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರ ಜಿಲ್ಲೆಯ ತಿಪಟೂರು ಪ್ರೋ ಕೃಷ್ಣಮೂರ್ತಿ ಬಿಳಿಗೆರೆ. ವಿಜಯಪುರದ ಲಲಿತಾ ಕೆ ಹೊಸಪ್ಯಾಟಿ, ಮಂಗಳೂರಿನ ಭಾಸ್ಕರ ಅಚ್ಚಳ, ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ರಾಯಚೂರಿನ ವಿ. ಎನ್ ಅಕ್ಕಿ, ಮಕ್ಕಳ ಸಾಂಸ್ಕೃತಿಕ, ಚಿತ್ರಕಲೆ ಕ್ಷೇತ್ರದಲ್ಲಿ ಮೈಸೂರಿನ ಎಸ್. ಎಫ್. ಹುಸೇನಿ, ಮಕ್ಕಳ ವಿಕಲಚೇತನ ಕ್ಷೇತ್ರದಲ್ಲಿ ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಮಕ್ಕಳ ಮನೋವಿಕಾಸ. ಹಕ್ಕುಗಳ ಕ್ಷೇತ್ರದಲ್ಲಿ ಶಿವಮೊಗ್ಗದ ಡಾ ಕೆ. ಎಸ್ ಪವಿತ್ರಾ ಅವರು 2022-23ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2023-24ನೇ ಸಾಲಿಗೆ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ:

ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಂಡಿತ ರಾಮಕೃಷ್ಣಶಾಸ್ತ್ರಿ, ಮೈಸೂರಿನ ಬೆ. ಗೋ. ರಮೇಶ, ಕೊಪ್ಪಳದ ಅರುಣಾ ನರೇಂದ್ರ, ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಬೆಂಗಳೂರಿನ ಮಾಲತೇಶ ಬಡಿಗೇರ, ಮಕ್ಕಳ ಸಾಂಸ್ಕೃತಿಕ, ಶೈಕ್ಷಣಿಕ, ಚಿತ್ರಕಲೆ ಕ್ಷೇತ್ರದಲ್ಲಿ ಹುಬ್ಬಳ್ಳಿಯ ಪ್ರತಾಪ ಆರ್ ಬಹುರೂಪಿ, ಮಕ್ಕಳ ಶೈಕ್ಷಣಿಕ.ಸಾಮಾಜಿಕ ಕ್ಷೇತ್ರದಲ್ಲಿ ಬೀದರನ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್, ಮಕ್ಕಳ ಮನೋವಿಕಾಸ ಹಕ್ಕುಗಳ ಕ್ಷೇತ್ರದಲ್ಲಿ ಬೆಂಗಳೂರಿನ ನಾಗಸಿಂಹ ಜಿ. ರಾವ್ ಅವರು 2023-24ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2022-23ನೇ ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳು:

ಸಂಗೀತ ಕ್ಷೇತ್ರದಲ್ಲಿ ಕಲಬುರ್ಗಿ ವಿಭಾಗದ ಅಪೇಕ್ಷಾ ಎಸ್. ಎನ್ ಸರಕಿಲ್. ಮೈಸೂರು ವಿಭಾಗದ ಪಂಚಮಿ ಬಿದನೂರ. ಬೆಳಗಾವಿ ವಿಭಾಗದ ಅಥರ್ವಾ ಆರ್. ಘಂಟೆಣ್ಣವರ ಹಾಗೂ ನೃತ್ಯ ಕ್ಷೇತ್ರದಲ್ಲಿ ಕಲಬುರ್ಗಿ ವಿಭಾಗದ ಸೃಷ್ಟಿ ಅಡಿಗ, ಮೈಸೂರು ವಿಭಾಗದ ಸಿಂಚನ ಹೆಚ್. ಎಮ್. ಬೆಂಗಳೂರು ವಿಭಾಗದ ಎನ್ ಶ್ರಿಯ ನರೇಂದ್ರ, ಬೆಳಗಾವಿ ವಿಭಾಗದ ಶ್ರೇಯಾ ಪ್ರಲ್ಲಾದ ಕುಲಕರ್ಣಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮೈಸೂರು ವಿಭಾಗದ ಬಿ. ದಿಯಾ ಭೀಮಯ್ಯ. ಬೆಂಗಳೂರು ವಿಭಾಗದ ಚಾರ್ವಿ ಎ.. ಬೆಳಗಾವಿ ವಿಭಾಗದ ಕಾವ್ಯಾ ತುಕಾರಾಮ ದಾನ್ವೇನವರ, ಕಲಬುರ್ಗಿ ವಿಭಾಗದ ಬಸವಪ್ರಸಾದ ಜ. ಪಾಟೀಲ, ಚಿತ್ರಕಲೆ ಕ್ಷೇತ್ರದಲ್ಲಿ ಮೈಸೂರು ವಿಭಾಗದ ದೃತಿ ಎಸ್.. ಕಲಬುರ್ಗಿ ವಿಭಾಗದ ಅಮೂಲ್ಯ ಮಠಪತಿ, ಬೆಳಗಾವಿ ವಿಭಾಗದ ಸುಖದಾ ಸತೀಶ ಮುರಗೋಡ. ಬಹುಮುಖ ಕ್ಷೇತ್ರದಲ್ಲಿ ಕಲಬುರ್ಗಿ ವಿಭಾಗದ ಮಯಾಂಕ ವಿ ಹಿರೇನೂರ. ಮೈಸೂರು ವಿಭಾಗದ ಧನ್ವಿ, ಬೆಂಗಳೂರು ವಿಭಾಗದ ಧವನಿ ಎನ್. ಬೆಳಗಾವಿ ವಿಭಾಗದ ಎಂ. ವಿ. ಶ್ರೇಯಾ, ಅಭಿನವ ಕರಡಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮೈಸೂರು ವಿಭಾಗದ ಲಿಖಿತ್ ಆರ್., ಬೆಳಗಾವಿ ವಿಭಾಗದ ಪ್ರಿಯಾಂಕಾ ಪುಂಡಲಿಕ ಪವಾರ, ಬೆಂಗಳೂರು ವಿಭಾಗದ ಪ್ರಜ್ವಲ್ ಎನ್ ಹಲಾಳೆ 2022-23ನೇ ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

2023-24ನೇ ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಗೆ ಆಯ್ಕೆ: ಸಂಗೀತ ಕ್ಷೇತ್ರದಲ್ಲಿ ಸ್ವಾತಿಕ ಗು. ಮಹಾಮನೆ. ಅನುರಾಗ ನಾಯಕ್. ಸಮರ್ಥ ಗೂಳಪ್ಪಾ ವಿಜಯನಗರ. ನೃತ್ಯ ಕ್ಷೇತ್ರದಲ್ಲಿ ವರ್ಷಿಣಿ ಪತ್ತಾರ. ದಿವ್ಯಶ್ರೀ ಎಚ್.ಆರ್.. ಪೃಥ್ವಿ ಎಮ್ ಹೆಗಡೆ, ಪಲ್ಲವಿ ಚಾಕಲಬ್ಬಿ, ಪ್ರತಿಫಲಾ ಮೆಂಚ, ನಿಶಾಂತ ಹಿರೇಮಠ, ರಚನಾ ಹಂಚಿನಮನಿ, ಕ್ರೀಡಾ ಕ್ಷೇತ್ರದಲ್ಲಿ ಅನಿಕೇತ ಬಳ್ಳಾರಿ. ಸ್ನೇಹ ಎಚ್ ಕೊಟ್ಯಾನ್, ಗ್ಲೋರಿಯಾ ಮುರ್ತೋಟಿ, ಸಮರ್ಥ ವಿ. ಕುಲಕರ್ಣಿ, ಕುಮಾರಿ ಜಾಹ್ನವಿ ಎಂ.ಆರ್., ಜೋನ್ನಾ ಭಾಸ್ಕರ್ ಹಾಗೂ ಬಹುಮುಖ ಕ್ಷೇತ್ರದಲ್ಲಿ ಸಾಹಿತ್ಯ ಗೊಂಡಬಾಳ, ಸಾನಿಧ್ಯ ಆಚಾರ್ಯ, ಸಂಕೇತ ಹೊಳೆಆಲೂರ. ಅನುಪ್ರಿಯಾ ಕುಲಕರ್ಣಿ, ಪುನಂ ಜಾಧವ, ಸುಪ್ರಿಯಾ ಇಟಗಿ, ಭೈರವಿ ಎಮ್.. ಶ್ರೀಲಕ್ಷ್ಮೀ ಭಟ್, ವಿಜ್ಞಾನ ಕ್ಷೇತ್ರದಲ್ಲಿ ನಮ್ರತಾ ಸಿನ್ನೂರ. ಕುಮಾರಿ ಉದ್ಭವಿ ಶೆಟ್ಟಿ, ಕುಮಾರಿ ಭಾಗ್ಯಶ್ರೀ ಡೊಣಗಿ, ಕುಮಾರಿ ಖುಷಿ ಎಮ್.. ನಾಟಕ ಕ್ಷೇತ್ರದಲ್ಲಿ ಕುಮಾರ ದಿಗಂತ ತುಂಬರಗುದ್ದಿ ಆಯ್ಕೆಯಾಗಿದೆ.

2022-23 ನೇ ಸಾಲಿನ ವಿಶೇಷ ಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ:

ಪೂಜಾ ಭರಮಪ್ಪ ಹೊಂಬಳೇರ, ರೇಷ್ಮಾ ನದಾಫ್, ಸಾತವ್ವಾ ಸಿ ಹರಿಜನ್, ಸಿದ್ದಾರ್ಥ ಅಗ್ನಿ, ಗೌತಮ ವಿಶ್ವನಾಥ ಭಾವಿಕಟ್ಟಿ, ಅಂಬಿಕಾ, ಕುಮಾರ ಭೀಮಾ ಎಸ್. ರಂಗನಾಥ ಕೆ.. ಮಂಜುಶ್ರೀ ಟಿ.. ಕುಮಾರ ನಿಶ್ಚಲ್ ಸಾಯಿ, ನಾಗವೇಣಿ. ಲಾವಣ್ಯ, ಶಿವಕುಮಾರ ಹೆಚ್. ಆರ್., ಡೇವಿಡ, ಲಕ್ಷ್ಮೀ, ಜಯಭೀಮರಾವ, ಸಾಗರ, ನಾಗು ಮಂ.. ಸಂತೋಷ್, ಜೀವನ್, ಗಾಯತ್ರಿ, ಲಕ್ಷ್ಮೀ, ಮೀನಾಕ್ಷಿ, ಸಮೀಕ್ಷಾ, ನಾಗವೇಣಿ, ಕಿರಣ ಇಂಗಳ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.

2023-24 ನೇ ಸಾಲಿನ ವಿಶೇಷ ಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ:

ದರ್ಶನ ಕುಂಟಗೌಡ್ರು, ಸುದೀಪ ಉಪ್ಪಾರ, ಪರಶುರಾಮ ದೊಡ್ಡಮನಿ, ಮಹೇಶ ಚವಡಿ. ಸಂಜನಾ ಪೂಜಾರಿ, ಕೃಷ್ಣಾ ಪೂಜಾರಿ, ಸಂಜೀವ ತೆಗ್ಗಿ. ಲಕ್ಷ್ಮೀ ವೆಂಕಟಪ್ಪ, ಭಾಗ್ಯಲಕ್ಷ್ಮೀ ಬಸವರಾಜ, ಕಾವ್ಯಶ್ರೀ ಜಿ.ಜೆ. ಸಾಗರ್ ಬಿ. ಎಸ್. ರಾಮಚರಣ, ಲಾವಣ್ಯ ಎಸ್.. ದಿವ್ಯಾ ಎನ್ ನಾಗರಾಜ, ಚಂದನ್ ಪಿ. ಆರ್., ಲಕ್ಷ್ಮೀ, ಸುಕನ್ಯ, ಪ್ರತಿಕ್ಷಾ, ಸ್ವಪ್ಪಾ, ಪ್ರವೀಣ ಜೆ. ಎನ್.. ರೋಜಾ, ವಸಂತಿ, ಭಾಗ್ಯಲಕ್ಷ್ಮೀ, ಆಕಾಶ, ನೇತ್ರಾವತಿ, ಸುಜನ್. ಮೌನೇಶ, ಶ್ರೀನಿವಾಸ ಬಿಸಲದಿನ್ನಿ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಅಕ್ಕಮಹಾದೇವಿ ವಿಶೇಷ ಕರ್ತವ್ಯ ಅಧಿಕಾರಿ ಅನ್ನಪೂರ್ಣ ಸಂಗಳದ ಹಾಗೂ ಇತರರು ಇದ್ದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾರ್ಗದರ್ಶನದಲ್ಲಿ ಅಕಾಡೆಮಿಗೆ ಹೊಸಸ್ವರೂಪ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾರ್ಗದರ್ಶನದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕಳೆದ ಎರಡು ವರ್ಷಗಳಿಂದ ಹಲವಾರು ಮಾದರಿ ಕಾರ್ಯಕ್ರಮಗಳ ಮೂಲಕ ಅಕಾಡೆಮಿಯನ್ನು ಕ್ರಿಯಾಶೀಲವಾಗಿ ಮುನ್ನಡೆಸಿದ್ದಾರೆ. ಧಾರವಾಡದಲ್ಲಿರುವ ಅಕಾಡೆಮಿಯ ಕೇಂದ್ರ ಕಚೇರಿಯ ಕಟ್ಟಡದಲ್ಲಿ ಸುಮಾರು 20 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಿಸಲಾಗಿದೆ. ಈಗ ನೂತನ ಸ್ಟುಡಿಯೋ ಉದ್ಘಾಟನೆಗೆ ಸಿದ್ಧಗೊಂಡಿದೆ.

ಮಿಷನ್ ವಿದ್ಯಾಕಾಶಿ ಮೂಲಕ ಎಸ್‌ಎಸ್‌ಎಲ್‌ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ಬಾಲ ವಿಕಾಸ ಅಕಾಡೆಮಿಯ ಸ್ಟುಡಿಯೋವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸ್ಟುಡಿಯೋದಲ್ಲಿ ನಾಡಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆತಂದು ಮಕ್ಕಳಿಗೆ ಉಪಯುಕ್ತವಾಗುವ ವಿಷಯ ತಜ್ಞರ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಬಾಲ ವಿಕಾಸ ಅಕಾಡೆಮಿಯಲ್ಲಿರುವ ಅವಕಾಶ ವಂಚಿತ ಮಕ್ಕಳನ್ನು ಗುರುತಿಸಿ ಅವರನ್ನು ನಿಸರ್ಗದ ಮಡಿಲಿಗೆ ಕರೆತರುವ ನಿಟ್ಟಿನಲ್ಲಿ ಬಾಲವಿಕಾಸ ಅಕಾಡೆಮಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. 15 ದಿನಗಳವರೆಗೆ ಅವರ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸುವ ಮೂಲಕ ರಾಜ್ಯದಲ್ಲಿನ 10 ಜನರ, ಮೂರು ತಂಡಗಳನ್ನಾಗಿಸಿ ಮಕ್ಕಳಿಗೆ ಹೊಸ ಆತ್ಮವಿಶ್ವಾಸ ತರುವ ಕೆಲಸ ಮಾಡುತ್ತಿದ್ದಾರೆ.

ದಾನಿಗಳ ನೆರವಿನಿಂದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಅನುದಾನದ ಹಣವನ್ನು ಬಳಸಿಕೊಂಡು ಪುಸ್ತಕಗಳನ್ನು ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಈ ನಾಲ್ಕು ಶೈಕ್ಷಣಿಕ ಜಿಲ್ಲೆಯ ಪ್ರತಿ ಸರಕಾರಿ ಶಾಲೆಗಳಿಗೆ ಈ ಪುಸ್ತಕವನ್ನು ಜಿಲ್ಲಾಧಿಕಾರಿ, ಸಿಇಓ ಅವರ ಸಹಕಾರದಲ್ಲಿ ಮುಟ್ಟಿಸುವ ಕೆಲಸ ಮಾಡಿದೆ.

ಇಂದಿನ ಬದಲಾದ ಜೀವನಶೈಲಿಯಲ್ಲಿ ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಪಾಲಕರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಪಾಲಕರಿಗೆ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ದತ್ತಿನಿಧಿ ಪಡೆಯುವ ಅವಕಾಶವಿದ್ದು, ಅದರಿಂದ 25 ಲಕ್ಷ ದತ್ತಿನಿಧಿಯ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹಣ ಇಟ್ಟು, ಅದರಿಂದ ಬರುವ ಬಡ್ಡಿಯ ಮೂಲಕ ಮಕ್ಕಳಿಗೆ ವಿಶೇಷ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಅವಕಾಶ ವಂಚಿತ ಮಕ್ಕಳಿಗೆ, ಫೀ ಕಟ್ಟಲು ಆಗದೆ ಇರುವವರಿಗೆ ಇದನ್ನು ಕೊಡಲು ಬಬಲೇಶ್ವರ ಅವರು ಸಚಿವರೊಂದಿಗೆ ಚರ್ಚಿಸಿದ್ದಾರೆ.

Related Articles

Back to top button