ಪ್ರಗತಿವಾಹಿನಿ ಸುದ್ದಿ, ಮೂಡಲಗಿ :
ಹದಗೆಟ್ಟಿರುವ ಯಾದವಾಡ-ಕುಲಗೋಡ ಹಾಗೂ ಯಾದವಾಡ-ವಂಟಗೂಡಿ ರಸ್ತೆ ದುರಸ್ತಿ ಕಾಮಗಾರಿಯನ್ನು ವಾರದೊಳಗೆ 62 ಲಕ್ಷ ರೂ.ಗಳ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಯಾದವಾಡ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ವಾರದೊಳಗೆ ಎರಡೂ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸುವ ಭರವಸೆ ನೀಡಿದರು.
ಯಾದವಾಡದಿಂದ ವಂಟಗೂಡಿ ಹಾಗೂ ಯಾದವಾಡದಿಂದ ಕುಲಗೋಡವರೆಗಿನ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ಯಾದವಾಡ ಗ್ರಾಮದಲ್ಲಿ ಸಿಮೆಂಟ್ ಹಾಗು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಅತಿಯಾದ ವಾಹನ ಸಂಚಾರ ಇರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಸಾರ್ವಜನಿಕರ ಮನವಿ ಮೇರೆಗೆ ಯಾದವಾಡ-ಕುಲಗೋಡ ಮತ್ತು ಯಾದವಾಡ-ವಂಟಗೂಡಿ ರಸ್ತೆಗಳಿಗೆ ನನ್ನ ಸ್ವಂತ ಹಣ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸುತ್ತೇನೆ.
ಯಾದವಾಡ-ಕುಲಗೋಡ ರಸ್ತೆಗೆ 50 ಲಕ್ಷ ರೂ. ಮತ್ತು ಯಾದವಾಡ-ವಂಟಗೂಡಿ ರಸ್ತೆಗೆ 12 ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳು ಆರಂಭವಾಗಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಹಿತಿ ನೀಡಿದರು.
ಯಾದವಾಡ ಗ್ರಾಮದ ಪ್ರಗತಿಗಾಗಿ ಈಗಾಗಲೇ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಬಳಕೆ ಮಾಡಲಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಪ್ರಗತಿಪರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗ್ರಾಮದ ಈಶ್ವರ(ಲಿಂಗನಗುಡಿ) ದೇವಸ್ಥಾನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಹಂತ-ಹಂತವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯಾದವಾಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಹಿರಿಯರಾದ ಬಿ.ಎಚ್. ಪಾಟೀಲ, ಪರ್ವತಗೌಡ ಪಾಟೀಲ, ರಂಗಪ್ಪ ಇಟ್ಟನ್ನವರ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಶಂಕರ ಬೆಳಗಲಿ, ಗೌಡಪ್ಪ ಗುರಡ್ಡಿ, ಹಣಮಂತ ಹುಚರಡ್ಡಿ, ಸುರೇಶ ಸಾವಳಗಿ, ಲಕ್ಷ್ಮಣ ಯರಗಟ್ಟಿ, ಬಸು ಕೇರಿ, ಶಿವಪ್ಪಗೌಡ ನ್ಯಾಮಗೌಡ, ಸತ್ತೆಪ್ಪ ಚಿಪ್ಪಲಕಟ್ಟಿ, ಬೀರಪ್ಪ ಮುಗಳಖೋಡ, ಸುಭಾಸ ವಂಟಗೋಡಿ, ಚಿತ್ರ ನಿರ್ಮಾಪಕ ಬಸು ಭೂತಾಳಿ, ಸದಾಶಿವ ದುರಗನ್ನವರ, ರಾಜು ಉದಪುಡಿ, ಬಸು ಹಿಡಕಲ್, ಶ್ರೀಶೈಲ ಢವಳೇಶ್ವರ, ರಾಜುಗೌಡ ಪಾಟೀಲ, ನಿಂಗನಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಧರೆಪ್ಪ ಮುಧೋಳ, ದಂತಾಳಿ, ರಿಯಾಜ್ ಥರಕಾರ, ಪರಸಪ್ಪ ರಾಮೋಜಿ ಮುಂತಾದವರು ಉಪಸ್ಥಿತರಿದ್ದರು.
ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ
ಸ್ವಂತ ನಿಧಿಯಿಂದ ಮೂಡಲಗಿ- ಖಾನಟ್ಟಿ ರಸ್ತೆ : ಬಾಲಚಂದ್ರ ಜಾರಕಿಹೊಳಿ
ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ರಸ್ತೆ ಅಗಲೀಕರಣ 15 ಮೀ ಬದಲು 12 ಮೀ -ಬಾಲಚಂದ್ರ ಜಾರಕಿಹೊಳಿ
ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಸಂಪುಟ ಅಸ್ತು: ಬಾಲಚಂದ್ರ ಜಾರಕಿಹೊಳಿ ಸಂತಸ
ತಳಕಟ್ನಾಳಕ್ಕೆ 20 ಕೋಟಿ ರೂ.ಗಳಷ್ಟು ವಿವಿಧ ಅಭಿವೃದ್ಧಿ ಕಾರ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ