
ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜ್ಯಾದ್ಯಂತ ಮಳೆಯ ಅಬ್ಬರಕ್ಕೆ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿ ನೀರಿನಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ತೆರಳಿದ್ದ ಬೋಟ್ ನದಿಯಲ್ಲಿ ಪಲ್ಟಿಯಾಗಿ ನಾಲ್ವರು ರಕ್ಷಣಾ ಸಿಬ್ಬಂದಿಗಳು ನೀರು ಪಾಲಾಗಿರುವ ಘಟನೆ ಬಳ್ಳಾರಿಯ ಸಿರಗುಪ್ಪ ತಾಲೂಕಿನ ಮುದೇನೂರಿನಲ್ಲಿ ನಡೆದಿದೆ.
ಮುದೇನೂರಿನ ಶನೇಶ್ವರ ದೇವಾಲಯಕ್ಕೆ ಹೋಗಿದ್ದಾಗ ವರುಣಾರ್ಭಟಕ್ಕೆ ವೇದಾವತಿ ನದಿ ನೇರು ದೇವಾಲಯದ ಸುತ್ತಲು ಆವರಿಸಿದೆ. ವಾಪಸ್ ಬರಲಾಗದೇ ಜನರು ಕಂಗಾಲಾಗಿದ್ದಾರೆ. ನದಿ ನೀರಿನಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿಗಳು ತೆರಳಿದ್ದ ಬೋಟ್ ನೋಡ ನೋಡುತ್ತಿದ್ದಂತೆಯೇ ನದಿಯಲ್ಲಿ ಪಲ್ಟಿಯಾಗಿದೆ. ನಾಲ್ವರು ಸಿಬ್ಬಂದಿಗಳು ನೀರುಪಾಲಾಗಿದ್ದಾರೆ.
ನೀರು ಪಾಲಾದ ಸಿಬ್ಬಂದಿಗಳು ನದಿಯಲ್ಲಿ ಈಜಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ. ನದಿಯಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಇದೀಗ ಮತ್ತೋಂದು ಬೋಟ್ ತೆರಳಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; SDPI ಮುಖಂಡನ ನಿವಾಸದ ಮೇಲೆ NIA ದಾಳಿ
https://pragati.taskdun.com/latest/praveen-nettaru-murder-casesdpi-leaderriyaz-parangipetenia-raid/