Latest

ಬೊಮ್ಮಾಯಿ ಜೊತೆ ಗಂಟೆಗೂ ಹೆಚ್ಚು ಸಮಯ ಚರ್ಚಿಸಿದ ಪ್ರಧಾನಿ ಮೋದಿ! ; ಹುಬ್ಬಳ್ಳಿಗೆ ಏಮ್ಸ್ ಕೇಳಿದ ಸಿಎಂ

ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಪ್ರಧಾನಿಗೆ ಮನವಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಮಯ ಎಷ್ಟು ಗೊತ್ತಾ?

ಒಂದು ಗಂಟೆಗೂ ಹೆಚ್ಚು. 

ಮೋದಿ ಮತ್ತು ಬೊಮ್ಮಾಯಿ ಒಂದು ಗಂಟೆಗೂ ಹೆಚ್ಚು ಕಾಲ ಅತ್ಯಂತ ಖುಷಿ ಖುಷಿಯಿಂದ ಮಾತನಾಡುತ್ತ ಕಳೆದರೆಂದರೆ ನಂಬುವುದೂ ಕಷ್ಯ. ಅಷ್ಟೊಂದು ಸಮಯವನ್ನು ಇದೇ ಮೊದಲ ಬಾರಿಗೆ ಪ್ರಧಾನಿ ಕರ್ನಾಟಕದ ಮುಖ್ಯಮಂತ್ರಿಗೆ ನೀಡಿದರು.

ಆಡಳಿತದ ಅನುಭವಗಳನ್ನು ಹಂಚಿಕೊಂಡ ಇಬ್ಬರು ನಾಯಕರು, ಮುಂದಿನ ದಿನಗಳಲ್ಲಿ ನಡೆಯಬೇಕಾದ ದಾರಿ, ಪಕ್ಷ ಸಂಘಟನೆ, ಕರ್ನಾಟಕದ ಪ್ರವಾಹ, ಕೊರೋನಾ ಪರಿಸ್ಥಿತಿ ಎಲ್ಲವನ್ನೂ ಚರ್ಚಿಸಿದರು.

Home add -Advt

ಬೊಮ್ಮಾಯಿಗೆ ಎಲ್ಲ ರೀತಿಯಿಂದಲೂ ಕೇಂದ್ರ ಸಹಕಾರ ನೀಡಲಿದೆ. ಉತ್ತಮ ಆಡಳಿತ ನೀಡುವ ಕಡೆಗೆ ಗಮನ ಕೊಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಸ್ವಚ್ಛ ಕೈಗಳಿಗೆ ಅಧಿಕಾರ ನೀಡಿ ಎನ್ನುವ ಸಲಹೆ, ಸೂಚನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬೊಮ್ಮಾಯಿಗೆ ನೀಡದರೆಂದು ಗೊತ್ತಾಗಿದೆ.

 

 ಏಮ್ಸ್ ಮಂಜೂರು ಮಾಡುವಂತೆ  ಮನವಿ

 ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು  ಪ್ರಧಾನಿ ನರೇಂದ್ರ ಮೋದಿ ಬಳಿ, ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು.
ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿದರು.

Related Articles

Back to top button