Cancer Hospital 2
Beereshwara 36
LaxmiTai 5

*ಹೋಟೆಲ್ ಗಳ ಮೇಲೆ ಕಲ್ಲು ತೂರಾಟ; ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರು ಅರೆಸ್ಟ್*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ಭುಗಿಲೆದ್ದಿದೆ. ಬೆಂಗಳೂರು ಬಂದ್ ವೇಳೆ ಹೋಟೆಲ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಸೆ.26ರಂದು ಕರೆ ನೀಡಲಾಗಿದ್ದ ಬೆಂಗಳೂರು ಬಂದ್ ವೇಳೆ ಗುಂಪೊಂದು ಬೆಂಗಳೂರಿನ ಜಯನಗರದ ಹಲವು ಹೋಟೆಲ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ಪೀಠೋಪಕರಣ, ಗಾಜುಗಳನ್ನು ಒಡೆದುಹಾಕಿ ಪರಾರಿಯಾಗಿತ್ತು. ಈ ಪ್ರಕರಣ ಸಂಬಂಧ ಜಯನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಕೇಸ್ ಗೆ ಸಂಬಂಧಿಸಿದಂತೆ ಶಿವು ಹಾಗೂ ವಿಶ್ವ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ವಿಚರಣೆ ವೇಳೆ ಕೃತ್ಯದ ಹಿಂದೆ ಇನ್ನಿಬ್ಬರು ಇರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೀಗ ಜಯನಗರ ಪೊಲಿಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Emergency Service

ಬಂಧಿತರನ್ನು ಯೋಗೇಶ್ ಹಾಗೂ ಸೋಮಶೇಖರ್ ಎಂದು ಗುರುತಿಸಲಾಗಿದೆ. ಬಂಧಿತರಿಬ್ಬರೂ ಬಿಜೆಪಿ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಜಯನಗರ ಎಂಎಲ್ ಎ ರಾಮಮೂರ್ತಿ ಬೆಂಬಲಿಗರು ಎನ್ನಲಾಗಿದೆ.


Bottom Add3
Bottom Ad 2