*ಸಣ್ಣಮಳೆಗೆ ಮುಳುಗಿದ ಬೆಂಗಳೂರು-ಮೈಸೂರು ಧಶಪಥ ಹೈವೇ; ಮೋದಿಯವರು ಬಂದು ಈಗ ರೋಡ್ ಶೋ ಮಾಡಲಿ; ಬೋಟಲ್ಲೋ, ಕಾರಲ್ಲೋ ಅವರೇ ನಿರ್ಧರಿಸಲಿ ಎಂದ ಕಾಂಗ್ರೆಸ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾದ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿನ್ನೆ ಸುರಿದ ಮಳೆಗೆ ಕೆರೆಯಂತಾಗಿದ್ದು, ಅವೈಜ್ಞಾನಿಕ ಕಾಮಗಾರಿ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ವಾರದ ಹಿಂದೆ ಪ್ರಧಾನಿ ಮೋದಿಯವರಿಂದ ಉದ್ಘಾಟನೆಯಾದ ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದಂತ, ಬಿಜೆಪಿಯ ಅಭಿವೃದ್ಧಿಯ ದ್ಯೋತಕವಾದ ಏಕೈಕ ಹೈ-ಫೈ ದುಬಾರಿ ಟೋಲ್ ರಸ್ತೆಯು ಒಂದು ಮಳೆಗೆ ಸೃಷ್ಟಿಸಿದ ಅವಾಂತರವಿದು. ಈ ಅವೈಜ್ಞಾನಿಕ ಕಾಮಗಾರಿಗೆ ಈಗ ಯಾರು ಹೊಣೆ ಹೊರುತ್ತೀರಿ? ಪ್ರಧಾನಿ ಮೋದಿ ಅಥವಾ ಪ್ರತಾಪ್ ಸಿಂಹ?
ಎಂದು ವಿಡಿಯೋ ಮೂಲಕ ಟ್ವೀಟ್ ಮಾಡಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಪುಣ್ಯಾತ್ಮರೆಲ್ಲ ಹೆದ್ದಾರಿ ಜಲಾವೃತವಾಗಿರುವ ಬಗ್ಗೆ ಮಾತನಾಡಬೇಕು. ದುಬಾರಿ ಟೋಲ್ ಮಾತ್ರ ಬೇಕು ಆದರೆ ಅದಕ್ಕೆ ತಕ್ಕ ಸೇವೆ ಒದಗಿಸಲು ಸಾಧ್ಯವಿಲ್ಲ, ಪ್ರಯಾಣಿಕರ ಜೀವವನ್ನು ಬಿಜೆಪಿಯ 40% ವ್ಯವಹಾರ ಪಣಕ್ಕಿಟ್ಟಿದೆ. ಭ್ರಷ್ಟಾಚಾರ ಬಿಟ್ಟರೆ ನಿಮ್ಮ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದೋಣಿಗಳಿಗೆ ಟೋಲ್ ಎಷ್ಟು? ಯಾವುದಕ್ಕೂ ದೋಣಿಗಳಿಗೂ ಟೋಲ್ ದರ ನಿಗದಿ ಮಾಡುವುದು ಉತ್ತಮ. ಒಂದು ಸಾಧಾರಣ ಮಳೆಗೆ ರಸ್ತೆ ಮುಳುಗುತ್ತಿದೆ ಎಂದರೆ 40% ಲೂಟಿಯಲ್ಲಿ ಅದೆಷ್ಟು ಕಳಪೆ ಕಾಮಗಾರಿಯಾಗಬಹುದು? ಪ್ರತಾಪ್ ಸಿಂಹ ಅವರೇ ಈಗ ಫೇಸ್ ಬುಕ್ ಲೈವ್ ಮಾಡುವುದಿಲ್ಲವೇ? ಸೆಲ್ಫೀ ತೆಗೆಯುವುದಿಲ್ಲವೇ?

Home add -Advt

ಕಳೆದ ವರ್ಷವೇ ಬೆಂಗಳೂರು-ಮೈಸೂರು ಹೆದ್ದಾರಿ ಮುಳುಗಿತ್ತು. ಈಗ ಮತ್ತೊಮ್ಮೆ ಸಣ್ಣ ಮಳೆಗೆ ಅವಾಂತರ ಸೃಷ್ಟಿಯಾಗಿದೆ ಅಂದರೆ ಇದು ಅವೈಜ್ಞಾನಿಕವಾಗಿರುವ ಭ್ರಷ್ಟಪಥವಲ್ಲವೇ? ನರೇಂದ್ರ ಮೋದಿಯವರು ಈಗ ಬಂದು ರೋಡ್ ಶೋ ಮಾಡಬೇಕು ಎಂದು ಕಾಂಗ್ರೆಸ್ ಆಹ್ವಾನಿಸುತ್ತದೆ. ಆದರೆ ರೋಡ್ ಶೋ ಕಾರಿನಲ್ಲಿ ಮಾಡುವರೋ ಬೋಟಿನಲ್ಲಿ ಮಾಡುವರೋ ಅವರೇ ನಿರ್ಧರಿಸಲಿ ಎಂದು ಟೀಕಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button