Latest

ಬೆಂಗಳೂರಿನಿಂದಲೇ ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಸಂಚು: ಉಗ್ರ ಅಬ್ದುಲ್ ಬಾಯ್ಬಿಟ್ಟ ಸತ್ಯವೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಯೇ ಕುಳಿತು ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾಗಿ ಬೆಂಗಳೂರು ಗಲಭೆ ಪ್ರಕರಣದಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಎನ್ ಐ ಎ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಸುಮಾರು‌ 40 ಆರೋಪಿಗಳಿಗೆ ಉಗ್ರರ ಜೊತೆ ಸಂಪರ್ಕವಿತ್ತು ಎಂಬ ಮಾಹಿತಿಯಿತ್ತು. ಈ ಹಿನ್ನಲೆಯಲ್ಲಿ ಸಿಸಿಬಿಯಿಂದ ಮಾಹಿತಿ ಪಡೆದ ಎನ್ ಐಎ ಉಗ್ರರ ಜತೆಸಂಪರ್ಕದಲ್ಲಿದ್ದ ಅಬ್ದುಲ್ ರೆಹಮಾನ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ. ಈ ವೇಳೆ ಅಬ್ದುಲ್ ಹಲವಾರು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದು, ಬೆಂಗಳೂರಿನಿಂದಲೇ ದೇಶದ ವಿವುಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾಗಿ ತಿಳಿಸಿದ್ದಾನೆ.

ಅಲ್ಲದೇ ಉಗ್ರರ ಸಂಪರ್ಕ ಸಾಧಿಸಲು ಒಂದು ಆಪ್ ನ್ನು ಅಭಿವೃದ್ಧಿ ಪಡಿಸಿದ್ದಾಗಿ ಹಾಗೂ ಅದನ್ನು ಸಧ್ಯದಲ್ಲೇ ಬಿಡುಗಡೆಮಾಡಲೆದ್ದೆವು ಎಂದು ಹೇಳಿದ್ದಾನೆ. ಇನ್ನು ತಾನು ಉಗ್ರರ ಜತೆ ತನ್ನ ನಿಜವಾದ ಹೆಸರಿನೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಉಗ್ರರು ತನಗೆ ಡಾಕ್ಟರ್ ಬ್ರೇವ್ ಬಸವನಗುಡಿ ಎಂಬ ಕೋಡ್ ವರ್ಡ್ ಕೊಟ್ಟಿದ್ದರು ಎಂದು ಹೇಳಿದ್ದಾನೆ.

ಉಗ್ರ ಅಬ್ದುಲ್ ಸಾಮಾಜಿಕ ಜಾಲತಾಣಗಲಲ್ಲಿ ತನ್ನ ಹೆಸರನ್ನು ಡಾಕ್ಟರ್ ಬ್ರೇವ್ ಗುಪ್ತಾ ಎಂದು ಹಾಕಿಕೊಂಡಿದ್ದು, ಈ ಮೂಲಕ ಹಲವರು ತನ್ನ ಸಂಪರ್ಕಕ್ಕೆ ಬರುವಂತೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button