ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಈ ಮೂಲಕ ಬೆಂಗಳೂರು ನಗರದಲ್ಲಿ ಸೋಂಕಿತ ಪೊಲೀಸರ ಸಂಖ್ಯೆ 66ಕ್ಕೇರಿದೆ.
ಇಂದು ಕುಮಾರಸ್ವಾಮಿ ಲೇಔಟ್ ಹೆಡ್ ಕಾನ್ಸ್ಟೇಬಲ್ ಹಾಗೂ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪೊಲೀಸ್ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನು, ಕುಮಾರಸ್ವಾಮಿ ಲೇಔಟ್ನ ಹೆಡ್ ಕಾನ್ಸ್ಟೇಬಲ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಹತ್ತು ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು. ಜೊತೆಗೆ ಮೂರು ದಿನಗಳ ಹಿಂದೆ ಕೊರೋನಾ ಚೆಕಪ್ ಸಹ ಮಾಡಲಾಗಿತ್ತು. ಆದರೆ, ಇಂದು ಇವರಿಗೆ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಹೀಗಾಗಿ ಈ ಸೋಂಕಿತ ಪೊಲೀಸರನ್ನು ವಿಕ್ಟೋರಿಯಾದ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಸಿಸಿಬಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಪೊಲೀಸರಿಗೆ ಈ ಹಿಂದೆಯೇ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಪೊಲೀಸ್ ಕಾನ್ಸ್ಟೇಬಲ್ಗೆ ಈಗ ಕೊರೋನಾ ಪತ್ತೆಯಾಗಿದೆ. ಓಲಾ ವಂಚನೆ ಪ್ರಕರಣ ಸಂಬಂಧ ಕೊರೋನಾ ಕಾಣಿಸಿಕೊಂಡ ಆರೋಪಿಯನ್ನು ಬಂಧಿಸಿದ್ದರಿಂದ 14 ಜನ ಪೊಲೀಸರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ