ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪುರುಷರಿಗೆ ಮಹಿಳೆಯರ ಮೂಲಕ ವಿಡಿಯೋ ಕರೆ ಮಾಡಿ ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಮೂವರು ಅಂತರಾಜ್ಯ ವಂಚಕರನ್ನು ಸಿಐಡಿ ಕ್ರ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಮೂವರು ಸಾಮಾಜಿಕ ಜಾಲತಾಣಗಳ ಮೂಲಕ ವಂಚಿಸುತ್ತಿದ್ದರು. ಬಂಧಿತರನ್ನು ಹರ್ಯಾಣ ಮೂಲದ ಮೊಹಮ್ಮದ್ ಮುಜಾಹಿದ್ (30), ಮೊಹಮ್ಮದ್ ಇಕ್ಬಾಲ್ (28), ಆಸಿಫ್ (27) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 6 ಮೊಬೈಲ್, ಸಾವಿರಾರು ನಕಲಿ ಸಿಮ್ ಕಾರ್ಡ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿದ್ದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಆರೋಪಿ ಮೊಹಮ್ಮದ್ ಮುಜಾಹಿದ್ ನಕಲಿ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳ ಏಜೆನ್ಸಿ ಪಡೆದುಕೊಂಡಿದ್ದ. ವಿತರಕರಿಂದ ಸಿಮ್ ಕಾರ್ಡ್‌ಗಳ್ನು ಆಕ್ಟಿವ್ ಮಾಡುವ ಸಲುವಾಗಿ ಡೆಮೋ ಸಿಮ್‌ಗಳು ಮತ್ತು ಒಟಿಪಿಗಳನ್ನು ಪಡೆದುಕೊಳ್ಳುತ್ತಿದ್ದ. ಬಳಿಕ ಈ ಮೊದಲು ಡಿಜಿಟಲ್ ವ್ಯಾಲೆಟ್‌ನೊಂದಿಗೆ ಸಂಪರ್ಕದಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಮಾಡಿ ನಕಲಿ ದಾಖಲಾತಿಗಳ ಮೂಲಕ ಇತರೆ ಇಬ್ಬರು ಆರೋಪಿಗಳ ಜತೆ ಸೇರಿಕೊಂಡು ಕಳೆದ 10 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳನ್ನು ಸಕ್ರಿಯಗೊಳಿಸಿ, ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದ.
ಸಿಐಡಿ ಸೈಬರ್ ವಿಭಾಗದ ಇನ್ಸ್ ಪೆಕ್ಟರ್ ನಯಾಜ್ ಅಹ್ಮದ್, ಪಿಎಸ್ ಐ ರಾಜೇಶ್ ನೇತೃತ್ವದ ತಂಡ ಆರೋಪಿಗಳನ್ನು ಹರ್ಯಾಣದ ನೂಹ್, ಪುನ್ಹಾನ ಮತ್ತು ಪಲ್ವಾನದಲ್ಲಿ ಬಂಧಿಸಿದೆ.
5 ಶವಗಳ ಮಧ್ಯೆ 2 ವರ್ಷದ 5 ದಿನ ಮಗು ಬದುಕುಳಿದಿದ್ದೇ ರೋಚಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ