Latest

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಮತ್ತೊಂದು ಹೊಸ ತಳಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರೋಪಾಂತರ ವೈರಸ್ ಅಟ್ಟಹಾಸ ಮಿತಿ ಮೀರುತ್ತಿದ್ದು, ಇದೀಗ ಹೊಸ ತಳಿ ಪತ್ತೆಯಾಗಿದೆ.

ಮೂರನೇ ಅಲೆ ಆತಂಕದ ನಡುವೆ ಕೊರೊನಾ ಹೊಸ ರೀತಿಯಲ್ಲಿ ರೂಪಾಂತರಗೊಂಡು ದಾಳಿ ಇಡುತ್ತಿದ್ದು, ಬೆಂಗಳೂರಿನಲ್ಲಿ 148 ಜನರಲ್ಲಿ ಡೆಲ್ಟಾ ಹಾಗೂ 8 ಜನರಲ್ಲಿ ಕಪ್ಪಾ ತಳಿ ದೃಢಪಟ್ಟಿದೆ.

192 ಜನರ ಗಂಟಲು ದ್ರವವನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ಗೆ ರವಾನಿಸಲಾಗಿತ್ತು. ಅವರಲ್ಲಿ 148 ಜನರಲ್ಲಿ ಡೆಲ್ಟಾ ತಳಿ ಹಾಗೂ 8 ಜನರಲ್ಲಿ ಕಪ್ಪಾ ಸೋಂಕು ಪತ್ತೆಯಾಗಿದೆ. 7 ಜನರಲ್ಲಿ ಡೆಲ್ಟಾದ ಇತರೆ ತಳಿ ಕೂಡ ಪತೆಯಾಗಿದ್ದು, ಇತರೆ 29 ಕೊರೊನಾ ಹೊಸ ರೂಪಾಂತರ ವೈರಾಣುಗಳು ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 15ರ ಬಳಿಕ ಕರುನಾಡು ಮತ್ತೆ ಲಾಕ್ ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button