Latest

ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಬಾಣಂತಿ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಸೆಗದೇ ಜನರು ಸಾವನ್ನಪ್ಪುತ್ತಿರುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ 6 ದಿನದ ಬಾಣಂತಿ ಕೊರೊನಾಗೆ ಬಲಿಯಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ರಾಜಾಜಿನಗರ ಖಾಸಗಿ ಆಸ್ಪತ್ರೆಯಲ್ಲಿ 6 ದಿನಗಳ ಹಿಂದೆ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಬಾಣಂತಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆ್ಯಂಟಿಜೆನ್‌ ಟೆಸ್ಟ್ ಮಾಡಿದ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಕೊರೊನಾ ಸೋಂಕು ದೃಢವಾಗುತ್ತಿದಂತೆ ಮಹಿಳೆಯನ್ನು ಖಾಸಗಿ ಆಸ್ಪತ್ರೆಯಿಂದ ಕರೆದುಕೊಂಡು ಚಿಕಿತ್ಸೆ ಪಡೆಯಲು ಆಂಬುಲೆನ್ಸ್ ನಲ್ಲಿ ತೆರಳಿದ್ದರು. ಬರೋಬ್ಬರಿ 12 ಗಂಟೆಗಳ ಕಾಲ ಬಾಣಂತಿಯನ್ನು ಕರೆದುಕೊಂಡು ವಿವಿಧ ಆಸ್ಪತ್ರೆಗೆ ಭೇಟಿ ನೀಡಿದರೂ ಬೆಡ್ ಇಲ್ಲ ಎಂದು ಕಳುಹಿಸಿದ್ದರು.

ಮಹಿಳೆಯ ಕುಟುಂಬಸ್ಥರು ತಮಗೆ ತಿಳಿದಿದ್ದ ವ್ಯಕ್ತಿಯೊಬ್ಬರಿಂದ ಶಿಫಾರಸು ಪಡೆದು ಕೊನೆಗೆ ಮುಂಜಾನೆ 4 ಗಂಟೆ ವೇಳೆಗೆ ಬೊಮ್ಮಸಂದ್ರದ ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಿಸಲು ಆಗಮಿಸಿದ್ದರು. ಆದರೆ ಆ ವೇಳೆಗೆ ಬಾಣಂತಿ ಆಂಬುಲೆನ್ಸ್ ನಲ್ಲೇ ಸಾವನ್ನಪ್ಪಿದ್ದರು.

Home add -Advt

Related Articles

Back to top button