Latest

ಮಹಿಳೆ ಅಡವಿಟ್ಟ ಮಾಂಗಲ್ಯ ಬಿಡಿಸಿಕೊಡುವುದಾಗಿ ಸಚಿವರ ಭರವಸೆ

ಪ್ರಗತಿವಾಹಿನಿ ಸುದ್ದಿ; ಗದಗ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಹಿಳೆಯೊಬ್ಬರು ಮಾಂಗಲ್ಯ ಸರ ಅಡವಿಟ್ಟು ಟಿವಿ ಖರೀದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್, ಮಹಿಳೆ ಅಡವಿಟ್ಟ ಮಾಂಗಲ್ಯ ಸರವನ್ನು ಬಿಡಿಸಿಕೊಡುವುದಾಗಿ ಹೇಳಿದ್ದಾರೆ.

ಕಸ್ತೂರಿ ಅವರು ಮಾಂಗಲ್ಯವನ್ನು ಅಡವಿಟ್ಟು ಟಿವಿ ಖರೀದಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿದ್ದರು. ಈ ಸುದ್ದಿ ನೋಡಿದ ಸಚಿವ ಸಿಸಿ ಪಾಟೀಲ್, ಘಟನೆ ಬಗ್ಗೆ ನಾನು ಮಾಹಿತಿ ಪಡೆದು ಮಹಿಳೆಯೊಂದಿಗೆ ಮಾತನಾಡಿದ್ದೇನೆ. ಅಲ್ಲದೇ 2 ದಿನಗಳಲ್ಲಿ ಮಾಂಗಲ್ಯವನ್ನು ಬಿಡಿಸಿ ಕೊಡಿಸುವುದಾಗಿ ಹೇಳಿದ್ದೇನೆ. ಅಲ್ಲದೇ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಿಳಿಸಿದರು.

Home add -Advt

ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದ ಮಹಿಳೆ ಕಸ್ತೂರಿ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ತಮ್ಮ ಮಾಂಗಲ್ಯವನ್ನು ಅಡವಿಟ್ಟು ಮನೆಗೆ ಟಿವಿ ಖರೀದಿಸಿದ್ದರು. ಚಂದನ ವಾಹಿನಿಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಈ ಮೂಲಕ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಮಹಿಳೆ ಮಾಂಗಲ್ಯವನ್ನೇ ಅಡವಿಟ್ಟಿದ್ದರು.

ಈ ಸುದ್ದಿ ಓದಿ –

ಮಹಿಳೆ ಅಡವಿಟ್ಟ ಮಾಂಗಲ್ಯ ಬಿಡಿಸಿಕೊಡುವುದಾಗಿ ಸಚಿವರ ಭರವಸೆ

Related Articles

Back to top button