Kannada News

ಮಠಾಧೀಶರ ಬಗ್ಗೆ ಅವಹೇಳನಕಾರಿ ಆಡಿಯೋ; ತಪ್ಪಿತಸ್ಥರ ಪತ್ತೆಗೆ ಬಿಜೆಪಿ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎಲ್ಲಾ ಸಮಾಜದ ಸಾಧು, ಸಂತರು, ಸನ್ಯಾಸಿ ಹಾಗೂ ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ದವಾಗಿದ್ದು, ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಾಹಾಕಲು ಬಿಜೆಪಿ ಸಿದ್ದ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
  ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈ ನಾಡಿನಲ್ಲಿ ಸಾಧು ಸಂತರ ಹಾಗೂ ಸನ್ಯಾಸಿಗಳ ತ್ಯಾಗದಿಂದ ಇಂದು ಪ್ರತಿಯೊಂದು ಸಮಾಜದ ಜನರು ಅವರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾಗಿ ಸಾಮರಸ್ಯದ ಜೀವನ ನಡೆಸುವಾಗ ಕೆಲ ಪಟ್ಟಬದ್ದ ಹಿತಾಸಕ್ತಿಯ ಜನರ ಆಧಾರ ರಹಿತ ಟೀಕೆ ಟಿಪ್ಪಣೆಗಳಿಂದ ಧಾರ್ಮಿಕ ಗುರು ಪರಂಪರೆಗೆ ಧಕ್ಕೆ ಉಂಟಾಗುತ್ತಿದೆ ಎಂದರು.
ಭಾರತ ಪ್ರಪಂಚಕ್ಕೆ ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ವಿಚಾರ ನೀಡಿದ ಹಾಗೂ ನೀಡುತ್ತಿರುವ ದೇಶವಾಗಿದೆ. ಈ ದೇಶದಲ್ಲಿರುವ ಋಷಿ ಮುನಿಗಳು, ಸನ್ಯಾಸಿಗಳು ಇರುವಷ್ಟು ಯಾವ ದೇಶದಲ್ಲಿಯೂ ಇಲ್ಲ. ಇವರಿಗೆ ನೀಡುವ ಪೂಜನೀಯ ಸ್ಥಾನ ದೇಶದಲ್ಲಿ ಬೇರೆ ಯಾರಿಗೂ ಸಿಗದು. ಆದರೆ ಕೆಲವೊದು ಷಡ್ಯಂತ್ರಗಳ ಮೂಲಕ ಇಂದು ರಾಜ್ಯದಲ್ಲಿ ಕೆಲ ಮಠಾದೀಶರ ಬಗ್ಗೆ ಇಲ್ಲ ಸಲ್ಲದ ಅರೋಪಗಳನ್ನು ಮಾಡುತ್ತಾ  ಪರಸ್ಪರ ಮಾತನಾಡಿದ ಸತ್ಯಕ್ಕ ಮತ್ತು ರುದ್ರಮ್ಮ ಹಾಸೀನಾಳ ಮಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ನಾಡಿನ ಅನೇಕ ಮಠಾಧೀಶರಿಗೆ ಮುಜುಗರ ಉಂಟು ಮಾಡಲಾಗುತ್ತಿದೆ ಎಂದರು.
  ಚಾರಿತ್ಯ ಹಾಳುಮಾಡುವ ಉದ್ದೇಶ ಹೊಂದಿದ್ದರಿಂದ, ಕಾಯಕ ತತ್ವದಡಿ ನಿಷ್ಠುರತೆ ಹೊಂದಿದ್ದ ಬೈಲಹೊಂಗಲ ತಾಲೂಕಿನ ನೇಗಿನಹಾಳದ ಮಡಿವಾಳೇಶ್ವರ ಮಠದ   ಬಸವ ಸಿದ್ದಲಿಂಗ ಮಹಾಸ್ವಾಮಿಗಳು ಸುಳ್ಳು ಆಪಾದನೆಯ ಆಡಿಯೋ ಕಿವಿಗೆ ಬಿದ್ದ ತಕ್ಷಣ ಮಾನಸಿಕವಾಗಿ ನೊಂದಿದ್ದ ಅವರನ್ನು,  ಕೆಲ ಕುಹಕಿಗಳು ಇದನ್ನೆ ದೊಡ್ಡದಾಗಿ ಮಾಡಿದ್ದರಿಂದ ಈ ನಾಡಿನ ಒಬ್ಬ ಗಟ್ಟಿತನದ ಮಠಾಧೀಶರನ್ನ ಕಳೆದುಕೊಂಡಿರುವದು ಈ ನಾಡಿಗೆ ತುಂಬಲಾರದ ನಷ್ಟವಾಗಿದೆ. ಇಂತಹ ಸೂಕ್ಷ್ಮ ಮನಸ್ಸಿನ ಸ್ವಾಮೀಜಿಗಳ ಮೇಲೆ ಹಾಗೂ ಎಲ್ಲ ಸಮಾಜಗಳ ಮಠಾಧೀಶರ ಮೇಲೆ ಲೈಂಗಿಕ ಅಸ್ತ್ರವನ್ನಿಟ್ಟುಕೊಂಡು ವ್ಯವಸ್ಥಿತ ಸಂಚು ರೂಪಿಸಿರುವ ವ್ಯಕ್ತಿಗಳನ್ನು ಹೆಡಮುರಿ ಕಟ್ಟಿ ಬಂಧಿಸಿಬೇಕು ಎಂಬುದೆ ಬಿಜೆಪಿ ಪಕ್ಷದ ನಿಲುವಾಗಿದೆ. ಈ ಬಗ್ಗೆ ಸರ್ಕಾರಕ್ಕು ಮತ್ತು ಪೋಲಿಸ್ ಇಲಾಖೆಗೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಈ ದೇಶದ ಸಂಸ್ಕೃತಿಯಾಗಿರುವ ಗುರು ಪರಂಪರೆ ಉಳಿಸಿ ಬೆಳೆಸಲು ಕಂಕಣಬದ್ದರಾಗಿರುವ ಸನ್ಯಾಸಿಗಳ ಹಾಗೂ ಎಲ್ಲ ಸಮಾಜದ ಮಠಾಧೀಶರ ಹಿತಕಾಪಾಡಲು ಬಿಜೆಪಿ ಪಕ್ಷ ಹಾಗೂ ಸಮಾಜದ ಎಲ್ಲ ಜನತೆ ಅವರ ಬೆನ್ನಿಗೆ ಇದೆ. ಈ ವಿಷಯದಲ್ಲಿ ಯಾವುದೆ ರಾಜಕಾರಣ ಮಾಡದೆ ನಮ್ಮ ನಮ್ಮ ಧರ್ಮದ ಹಾಗೂ ಧಾರ್ಮಿಕ ಸನ್ಯಾಸಿಗಳ ಉಳಿವಿಗೆ ಸದಾ ಶ್ರಮಿಸೋಣ. ಸುಳ್ಳು ಅಪಾದಾನೆ ಮಾಡುತ್ತಿರುವವರನ್ನು ಬಂಧಿಸಿ ಕಠಿಣ ಕ್ರಮ ತಗೆದುಕೊಳ್ಳುವ ಉದ್ದೇಶದಿಂದ ಆಡಿಯೋ ಹರಿಬಿಟ್ಟ
ಇವರ ಮೇಲೆ ಬೆಳಗಾವಿ ಪೋಲಿಸ್ ಕಮಿಷನರ್ ಮೂಲಕ ದೂರು ನೀಡಲಾಗಿದೆ ಎಂದರು.
ಯಾರಿಗಾದರು ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯ ಸಿಗಲೆಬೇಕು. ಯಾವುದೆ ವ್ಯಕ್ತಿ ಎಷ್ಟೆ ದೊಡ್ಡವರಿರಲಿ ಅವರು ತಪ್ಪು ಮಾಡಿದ್ದರೆ  ಈ ಮಣ್ಣಿನ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು  ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಇದನ್ನು ಬಿಟ್ಟು ವಾಕ್ ಸ್ವಾತಂತ್ರ್ಯ ಇದೆ ಎಂದು ಧರ್ಮದ ಅಪಮಾನ ಮಾಡುವದು, ಈ ರೀತಿ ಎಲ್ಲಾ ಮಠಾಧೀಶರ ಬಗ್ಗೆ  ಚಾರಿತ್ಯ ಹಾಳು ಮಾಡುವವರನ್ನು ತಕ್ಷಣ ಬಂಧಿಸಿ ಸಮಾಜದ ಸ್ವಸ್ತ್ಯ ಕಾಪಾಡುವದೆ ಬಿಜೆಪಿ ಪಕ್ಷದ ನಿಲುವಾಗಿದೆ ಎಂದರು.
 ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ವಕ್ತಾರ ಸಂಜಯ ಕಂಚಿ,  ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ನೀತಿನ ಚೌಗಲೆ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರ ಪೂಜೇರ, ಸಹ ಸಂಚಾಲಕರಾದ ಡಾ.ನಾಗನಗೌಡ ದೊಡಗೌಡರ, ಸಂತೋಷ ದೇಶನೂರ ಇದ್ದರು.

https://pragati.taskdun.com/belgaum-news/the-car-of-those-who-were-on-their-way-to-console-the-katthi-family-met-with-an-accident/

 

Home add -Advt

https://pragati.taskdun.com/crime-news/suicide-by-writing-bjp-leaders-name/

https://pragati.taskdun.com/latest/bjp-janotsavajalotsavacongresstweet/

Related Articles

Back to top button