Latest

ಖ್ಯಾತ ನಟಿ ಪೋರಿ ಮೋನಿ ಮೇಲೆ ಅತ್ಯಾಚಾರ, ಕೊಲೆಯತ್ನ

ಪ್ರಗತಿವಾಹಿನಿ ಸುದ್ದಿ; ಡಾಕಾ: ಬಾಂಗ್ಲಾದ ಜನಪ್ರಿಯ ನಟಿ ಪೋರಿ ಮೋನಿ ಖ್ಯಾತಿಯ ಶಮ್ಸುನ್ನಹಾರ್ ಸ್ಮೃತಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಕೊಲೆಯತ್ನ ಮಾಡಲಾಗಿದೆ. ನನಗೆ ನ್ಯಾಯ ಕೊಡಿಸಿ ರಕ್ಷಣೆ ನೀಡುವಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಫೇಸ್ ಬುಕ್ ನಲ್ಲಿ ಮನವಿ ಮಾಡಿರುವ ನಟಿ, ನಾನೊಬ್ಬ ಹೆಣ್ಣು, ಹೊರೋಯಿನ್, ದೇಶದ ಪ್ರಜೆ ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯಳು. ನನ್ನ ಮೇಲೆ ಇಷ್ಟೊಂದು ದೌರ್ಜನ್ಯವೆಸಗಲಾಗುತ್ತಿದರೂ ನಾನು ಸುಮ್ಮನಿರಲಾಗದು. ಪೊಲೀಸರು, ಕಾನೂನು ಮೊರೆ ಹೋದರೂ ನನಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ಹಲವರ ಸಹಾಯ ಕೇಳಿದ್ದೇನೆ. ಆದರೆ ಯಾರೂ ಸಹಾಯ ಮಾಡಿಲ್ಲ. ನಾನು ಬದುಕಬೇಕು ನನಗೆ ನ್ಯಾಯ ಕೊಡಿಸಿ ಎಂದು ಬಾಂಗ್ಲಾ ಪ್ರಧಾನಿಗೆ ಮನವಿ ಮಾಡಿದ್ದಾರೆ.

Related Articles
Home add -Advt

ಬಾಂಗ್ಲಾದ ಜನಪ್ರಿಯ ಸಿನಿಮಾ ನಟಿಯಾಗಿರುವ ಪೋರಿ ಮೋನಿ, ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಫೋರ್ಬ್ಸ್ ಬಿಡುಗಡೆ ಮಡಿರುವ ಏಷ್ಯ ಪೆಸಿಫಿಕ್ ನ ಅತ್ಯಂತ ಪ್ರಭಾವಶಾಲಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪೋರೊ ಮೋನಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಕೆಸಿಎನ್ ಚಂದ್ರಶೇಖರ್ ಇನ್ನಿಲ್ಲ

Related Articles

Back to top button