Kannada NewsKarnataka NewsLatestPolitics

*ಕೋವಿಡ್ ವೇಳೆ 40 ಸಾವಿರ ಕೋಟಿ ಅವ್ಯವಹಾರ; ಸ್ವಪಕ್ಷ ಬಿಜೆಪಿ ವಿರುದ್ಧ ಯತ್ನಾಳ್ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಸ್ವಪಕ್ಷ ಬಿಜೆಪಿ ವಿರುದ್ಧ ಮತ್ತೆ ಕಿಡಿಕಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೋವಿಡ್ ಸಂದರ್ಭದಲ್ಲಿ ಬರೋಬ್ಬರಿ 40 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದು ಹೆಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಶಾಸಕ ಯತ್ನಾಳ್, ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. 45 ರೂಪಾಯಿಯ ಒಂದು ಮಾಸ್ಕ್ ಗೆ 485 ರೂಪಾಯಿ ಹಾಕಲಾಗಿದೆ. ಕೋವಿಡ್ ವೇಳೆ ಕೋಟಿ ಕೋಟಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Home add -Advt

ನನಗೂ ಕೋವಿಡ್ ಬಂದಿತ್ತು. ಈ ವೇಳೆ ನನಗೂ 5.80 ಲಕ್ಷ ಬಿಲ್ ಮಾಡಿದ್ದಾರೆ. ಶಾಸಕರಿಗೆ ಸಂಬಳ ಇದೆ ಎಂದು ಸರ್ಕಾರದಿಂದ ಪಾವತಿಸಿದರೆ ಹೇಗೆ? ನಾನು ನನ್ನ ಬಿಲ್ ನ್ನು ಸ್ವಂತ ದುಡ್ಡಿನಲ್ಲಿ ಪಾವತಿಸಿದ್ದೇನೆ ಎಂದು ಹೇಳಿದ್ದಾರೆ.

ಸತ್ಯ ಹೇಳಿದ್ದಕ್ಕೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಅಥವಾ ನೋಟೀಸ್ ನೀಡಲಿ. ಅವರ ಬಗ್ಗೆ ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದಿದ್ದಾರೆ.


Related Articles

Back to top button