Latest

ಕೇಂದ್ರ ಸಚಿವ ಸದಾನಂದಗೌಡರಿಗೆ ಟಾಂಗ್ ನೀಡಿದ ಯತ್ನಾಳ್

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಯತ್ನಾಳ್ ಓರ್ವ ಆರ್ಡಿನರಿ ಶಾಸಕ ಎಂಬ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸದಾನಂದಗೌಡ ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ಒಳ್ಳೆಯ ಸಲಹೆ ನೀಡಿದ್ದಾರೆ. ನಮ್ಮ ಪ್ರಧಾನಿ ಮೋದಿಯವರು ತಾವು ಪ್ರಧಾನಿಯಲ್ಲ, ಸಾಮಾನ್ಯ ಸೇವಕ ಎನ್ನುವಾಗ ನಾನು ಸಾಮಾನ್ಯ ಕಾರ್ಯಕರ್ತನೆ ಎಂದು ಹೇಳಿದ್ದಾರೆ.

ನಾನು ಓರ್ವ ಸಾಮಾನ್ಯ ಶಾಸಕ. ರಾಷ್ಟ್ರೀಯ ನಾಯಕ ಎಂದು ನಾನೆಲ್ಲೂ ಹೇಳಿಲ್ಲ. ನಾನು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದೆ. ಡಿ.ವಿ.ಸದಾನಂದಗೌಡರು ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಯಾರು ಸೀನಿಯರ್ ಎಂದು ನೀವೇ ತಿಳಿದುಕೊಳ್ಳಿ ಎಂದು ಹೇಳುವ ಮೂಲಕ ಯತ್ನಾಳ್ ಟಾಂಗ್ ನೀಡಿದ್ದಾರೆ.

Related Articles

Back to top button