Belagavi NewsBelgaum NewsKannada NewsKarnataka News

*ಬಸವ ಜಯಂತಿ ಉತ್ಸವ-2026: ಸಮೀತಿಯ ಮುಖ್ಯ ಸಂಚಾಲಕರಾಗಿ ಬಸವರಾಜ ರೊಟ್ಟಿ ಆಯ್ಕೆ*

ಬಸವರಾಜ ರೊಟ್ಟಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಬಸವ ಜಯಂತಿ ಉತ್ಸವ 2026ರ ಮುಖ್ಯ ಸಂಚಾಲಕರಾಗಿ ನ್ಯಾಯವಾದಿ ಬಸವರಾಜ್ ರೊಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. 

ಇದೇ ರತ್ನಪ್ರಭಾ ಬೆಲ್ಲದ, ಈರಣ್ಣ ದಯನ್ನವರ್, ಅಶೋಕ್ ಬಂಡಿಗೇರಿ, ಡಾ. ಎಸ್ ಎಂ ದೊಡಮನಿ, ಎಸ್ ಜಿ ಸಿದ್ನಾಳ್, ಕಿರಣ್ ಅಗಡಿ,ಮಹಾಂತೇಶ್ ಗುಡಸ್, ರಮೇಶ ತುಬಚಿ,ಸೂರ್ಯಕಾಂತ್ ಬಾವಿ ಹೀಗೆ ಮುಂತಾದ ಹತ್ತು ಸದಸ್ಯರ ಸಂಚಾಲಕ ಮಂಡಳಿಯನ್ನು ರಚಿಸಲಾಯಿತು.   

Home add -Advt

ಲಿಂಗಾಯತ ಸಂಘಟನೆಗಳ ಒಕ್ಕೂಟದ  ಆಶ್ರಯದಲ್ಲಿ ವಿಶ್ವಗುರು, ಜಗಜ್ಯೋತಿ, ಕರ್ನಾಟಕದ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಉತ್ಸವವನ್ನು  ಆಚರಿಸುವ ಕುರಿತು ಎಲ್ಲ ವಿವಿಧ ಲಿಂಗಾಯತ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಭೆಯನ್ನು 

ಕಳೆದ ದಿ. 24 ರಂದು  ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಕರೆಯಲಾಗಿತ್ತು ಈ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

 ಈ ವರ್ಷದ ಬಸವ ಜಯಂತಿ ಉತ್ಸವವನ್ನು ಪ್ರತಿವರ್ಷದಂತೆ ಅತ್ಯಂತ  ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಯಿಂದ ಆಚರಿಸುವ ಕುರಿತು ನಿರ್ಣಯವನ್ನು ಅಂಗೀಕರಿಸಲಾಯಿತು.

ಈ ಸಭೆಯಲ್ಲಿ ಎಲ್ಲಾ ಲಿಂಗಾಯತ ಸಂಘಟನೆಗಳ ಒಕ್ಕೂಟದ ವತಿಯಿಂದ ದಿ.ಎಪ್ರಿಲ್ 19 ರಂದು ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ನಗರದಾದ್ಯಂತ ಮುಂಜಾನೆ 9:00ಗೆ ಬೈಕ್ ರಾಲಿಯನ್ನು ಆಯೋಜಿಸುವ ಕುರಿತು ನಿರ್ಣಯಿಸಲಾಯಿತು.  

ಜೊತೆಗೆ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಲಿರುವ 15 ಅಡಿ ಎತ್ತರದ ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆಯನ್ನು ಬಸವೇಶ್ವರ ಉದ್ಯಾನವನ, ಬಸವೇಶ್ವರ ಸರ್ಕಲ್ ಗೋವಾವೇಸ ವರೆಗೆ ಆಯೋಜಿಸಲು ತೀರ್ಮಾನಿಸಲಾಯಿತು. 

ಸಮಾಜದ ಎಲ್ಲ ಬಾಂಧವರಿಗೆ  ಬಸವ ಜಯಂತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಸಲದ ಬಸವ ಜಯಂತಿ ಉತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ರವಿವಾರ ದಿ. ಎಪ್ರೀಲ 26 ರಂದು ಸಾಯಂಕಾಲ ನಾಲ್ಕು ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಿಂದ ಆಯೋಜಿಸಲು ತೀರ್ಮಾನಿಸಲಾಯಿತು.

ಕಾರ್ಯಕ್ರಮಗಳನ್ನು ಸುಲಭವಾಗಿ ನೆರವೇರಿಸುವ ಸಲುವಾಗಿ ವಿವಿಧ ಉಪ ಸಮೀತಿಗಳನ್ನು, ಹಣಕಾಸು ಸಮೀತಿ, ಪ್ರಚಾರ ಸಮೀತಿ, ಮೆರವಣಿಗೆ ಸಮೀತಿ, ಪ್ರಸಾದ ದಾಸೋಹ ಸಮೀತಿ, ಸಾರಿಗೆ ಸಂಪರ್ಕ ಸಮೀತಿ ಗಳನ್ನು ರಚಿಸಲಾಯಿತು.

ಕೊನೆಯಲ್ಲಿ ಸಂಚಾಲಕ ಬಸವರಾಜ ರೊಟ್ಟಿ ಮಾತನಾಡಿ ಬಸವ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದ ಎಲ್ಲ ಬಾಂಧವರ ಸಹಕಾರವನ್ನು ಕೋರಿದರು. 

ಈ ಸಭೆಯಲ್ಲಿ ಬೆಳಗಾವಿ ಮಹಾನಗರದ ಎಲ್ಲ ಲಿಂಗಾಯತ ಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸೇವಕರು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಲಿಂಗಾಯತ ಸಮಾಜದ ಗಣ್ಯರು ಉಪಸ್ಥಿತರಿದ್ದರು.

Related Articles

Back to top button