Kannada NewsKarnataka NewsLatest

*ಲಾರಿ ಹಾಗೂ ಕಾರು ಭೀಕರ ಅಪಘಾತ; ಗುಜರಿ ಅಂಗಡಿಗೆ ಡಿಕ್ಕಿ ಹೊಡೆದು ಹೊತ್ತಿಕೊಂಡ ಬೆಂಕಿ: ಓರ್ವ ಸಜೀವದಹನ*

ಪ್ರಗತಿವಾಹಿನಿ ಸುದ್ದಿ: ಕಬ್ಬಿಣದ ಕಂಬಿ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಗುಜರಿ ಅಂಗಡಿಗೆ ಗುದ್ದಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ಸಜೀವದಹನವಾಗಿರುವ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಕುರುಬರಹಳ್ಳಿ ಬಳಿ ಈ ಘಟನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಮಲಗಿದ್ದ ಅಂಬದಾಸ್ (೨೨) ಎಂಬ ಯುವಕ ಮೃತಪಟ್ಟಿದ್ದಾರೆ. ಲಾರಿ ಚಾಅಲಕ ಶರ್ಮಾ ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರದಿಂದ ಸುಂಕದಕಟ್ಟೆಗೆ ಕಬ್ಬಿಣದ ಕಂಬಿ ಸಾಗಿಸಲಾಗುತ್ತಿತ್ತು. ಕುರುಬರಹಳ್ಳಿಬಳಿ ಇಳಿಜಾರಿನಲ್ಲಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿದೆ.

Related Articles

Back to top button