ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಸಚಿವರ ಖಾತೆ ಬದಲಾವಣೆಯಾಗಲಿದೆಯೇ? ಇಂತದ್ದೊಂದು ಚರ್ಚೆಗೆ ಕಾರಣವಾಗಿದೆ ವಿಧಾನ ಪರಿಷತ್ ನೂತನ ಸದಸ್ಯ ಬಸವರಾಜ್ ಹೊರಟ್ಟಿ ನೀಡಿದ ಹೇಳಿಕೆ.
ನನಗೆ ಮಂತ್ರಿಯಾಗಬೇಕು ಎಂಬ ಆಸೆಯಿಲ್ಲ. ಆದರೆ ಸಚಿವ ಸ್ಥಾನ ಸಿಕ್ಕರೂ ಸಿಗಬಹುದು. ನನಗೆ ಶಿಕ್ಷಣ ಖಾತೆ ಕೊಟ್ಟರು ಕೊಡಬಹುದು ಎಂದು ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಪರಿಷತ್ ಸದಸ್ಯ ಹೊರಟ್ಟಿ, ನನಗೆ ಮಂತ್ರಿಯಾಗಬೇಕು ಎಂಬ ಇಚ್ಛೆ ಇಲ್ಲ. ಸಭಾಪತಿ ಸ್ಥಾನ ಕೊಟ್ಟರೆ ಸಾಕು ಚನ್ನಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಅಂತಹ ಆಸೆಯೂ ನನಗಿಲ್ಲ. ಆದರೆ ಶಿಕ್ಷಣ ಖಾತೆ ಕೊಟ್ಟರು ಕೊಡಬಹುದು. ಸಚಿವ ಸ್ಥಾನದ ಉಸಾಬರಿಯೇ ಬೇಡ ಸಭಾಪತಿ ಸ್ಥಾನ ಇದ್ದರೆ ಸಾಕು ಎಂದು ಹೇಳಿದ್ದಾರೆ. ಈ ಮೂಲಕ ಶಿಕ್ಷಣ ಸಚಿವರು ಬದಲಾಗುವ ಸಾಧ್ಯತೆಯನ್ನು ಪರೋಕ್ಷವಾಗಿ ತಿಳಿಸಿರುವ ಹೊರಟ್ಟಿ, ತಾವೇ ಮತ್ತೆ ಸಭಾಪತಿಯಾಗುವ ಸಾಧ್ಯತೆ ಬಗ್ಗೆಯೂ ಸುಳಿವು ನೀಡಿದ್ದಾರೆ.
ದಾಖಲೆ ನಿರ್ಮಿಸಿದ ಹೊರಟ್ಟಿ ಸಚಿವರಾಗ್ತಾರಾ? ಪುನಃ ಸಭಾಪತಿಯಾಗ್ತಾರಾ?
ಡೋಲೋ-650ಗೆ IT ಡೋಸ್; ಮೈಕ್ರೋ ಲ್ಯಾಬ್ಸ್ ಮೇಲೆ ತೆರಿಗೆ ಅಧಿಕಾರಿಗಳ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ