Kannada NewsKarnataka NewsLatest

*ಸಿಎಂ ಸಲಹೆಗಾರ ಬಸವರಾಜ್ ರಾಯರೆಡ್ಡಿ ಫಾರ್ಮ್ ಹೌಸ್ ನಲ್ಲಿ ದರೋಡೆ: 15 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ್ ರಾಯರೆಡ್ದಿ ಫಾರ್ಮ್ ಹೌಸ್ ನಲ್ಲಿ ದರೋಡೆ ನಡೆದಿರುವ ಘಟನೆ ನಡೆದಿದೆ.

ಧಾರವಾಡದ ದಡ್ಡಿಕಮಲಾಪುರ ಗ್ರಾಮದ ಬಳಿ ಇರುವ ಬಸವರಾಜ ರಾಯರೆಡ್ದಿ ಅವರ ‘ಮಮತಾ’ ಎಂಬ ಹೆಸರಿನ ಫಾರ್ಮ್ ಹೌಸ್ ನಲ್ಲಿ ಕಳ್ಳತನ ನಡೆದಿದೆ. 8-10 ಜನರ ಗುಂಪು ಫಾರ್ಮ್ ಹೌಸ್ ಗೆ ನುಗ್ಗಿ ಅಲ್ಲಿದ್ದ ಕಣ್ಣಪ್ಪ ಜಡ್ಲಿ, ಹನುಮಂತ ಧನದಾವರ್, ಅಶೋಕ್, ಲಕ್ಷ್ಮಣ ಚದರಂಗಿ ಎಂಬುವವರಿಗೆ ಚಾಕು ತೋರಿಸಿ ಕೈಕಾಲು ಕಟ್ಟಿಹಾಕಿ, ಬಾಯಿಗೆ ಗಮ್ ಟೇಪ್ ಸುತ್ತಿ ಮೊಬೈಲ್, ಇತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದೆ. ಆಗಸ್ಟ್ 13ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Home add -Advt

ಆರೋಪಿಗಳ ಪತ್ತೆಗೆ ಪೊಲೀಸರು 8 ತಂಡ ರಚಿಸಿದ್ದರು. ಇದೀಗ 15 ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Related Articles

Back to top button