Belagavi NewsBelgaum NewsKannada News

ವಿಕಲಚೇತನರಿಂದ ಅರ್ಜಿಆಹ್ವಾನ

ಬ್ಯಾಟರಿ ಚಾಲಿತ ವ್ಹೀಲ್‌ಚೇರ್ (ಗಾಲಿಕುರ್ಚಿ):

ಪ್ರಗತಿವಾಹಿನಿ ಸುದ್ದಿ :
2023-24 ನೇ ಸಾಲಿಗೆ ಇಲಾಖೆಯ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ (ಗಾಲಿಕುರ್ಚಿ) ಯೋಜನೆಯಡಿ ಶೇ.75 ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಸಾಮರ್ಥ್ಯ ಹೊಂದಿರದ ಹಾಗೂ ಕನಿಷ್ಠ ಒಂದು ಕೈ, ಒಂದು ಕಣ್ಣು ಸ್ವಾಧೀನದಲ್ಲಿದ್ದು, ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಚಲಾಯಿಸಲು ಇತರೆ ಎಲ್ಲಾ ರೀತಿಯಲ್ಲಿ ಸದೃಢರಾಗಿರುವ ದೈಹಿಕ ವಿಕಲಚೇತನರಿಂದ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾದೆ.
ಬೆಳಗಾವಿ ಜಿಲ್ಲೆಯಲ್ಲಿನ ಕನಿಷ್ಠ 18 ವರ್ಷ ಗರಿಷ್ಠ 60 ವರ್ಷಗಳ ವಯೋಮಿತಿಯಲ್ಲಿರುವ ಅರ್ಹ ಹಾಗೂ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಅಗತ್ಯವಿರುವ ದೈಹಿಕ ವಿಕಲಚೇತನರು ಸದರಿ ಯೋಜನೆಯಡಿ ಫೆ 9, 2024 ರ ಒಳಗಾಗಿ ತಾಲೂಕು ಪಂಚಾಯತಿಯಲ್ಲಿರುವ ವಿವಿಧೋದ್ದೇಶ ಪುನರ್ವಸತಿಕಾರ್ಯಕರ್ತರನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ನಿಗಪಡಿಸಿದ ಅಂತಿಮ ದಿನಾಂಕದ ಒಳಗಾಗಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಷರತ್ತುಗಳು ಮತ್ತು ಅಗತ್ಯ ದಾಖಲಾತಿಗಳು:
ದೈಹಿಕ ವಿಕಲಚೇತನರು ಶೇ. 75 ಮತ್ತು ಅದಕ್ಕಿಂತ ಹೆಚ್ಚಿಗೆ ಅಂಗವಿಕಲತೆ ಪ್ರಮಾಣ ಹೊಂದಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಯು.ಡಿ.ಐ.ಡಿ. ಗುರುತಿನ ಚೀಟಿ ಹೊಂದಿರಬೇಕು.
ಕರ್ನಾಟಕದಲ್ಲಿ ಕನಿಷ್ಟ 10 ವರ್ಷ ವಾಸವಾಗಿರುವ ಬಗ್ಗೆ ತಹಸೀಲ್ದಾರರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ ಇರಬೇಕು.
ಕನಿಷ್ಠ 18 ವರ್ಷ ಮತ್ತು ಗರಿಷ್ಠ 60 ವರ್ಷ ವಯೋಮಿತಿಯಲ್ಲಿರುವ ವಿಕಲಚೇತನರು ಅರ್ಜಿ ಸಲ್ಲಿಸುವುದು.
ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಗಳಿಗಿಂತ ಕಡಿಮೆ ಇರುವಂತೆ ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಯಾವುದೇ ಮೂಲದಿಂದ ಇಲ್ಲಿಯವರೆಗೆ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಪಡೆದಿರುವುದಿಲ್ಲವೆಂದು ಮತ್ತು ಮಂಜೂರಾಗುವ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ನ್ನು ಬೇರೆಯವರಿಗೆ ಪರಭಾರೆ ಮಾಡುವುದಿಲ್ಲವೆಂದು ಹಾಗೂ ಯಂತ್ರಚಾಲಿತ ದ್ಚಿಚಕ್ರ ವಾಹನ ಪಡೆದಿರುವುದಿಲ್ಲವೆಂದು ರೂ.20/-ಗಳ ಬಾಂಡ್‌ನಲ್ಲಿ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: 0831 -2476096/7 ಗೆ ಸಂಪರ್ಕಿಸಬಹುದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button