Belagavi NewsBelgaum NewsKannada NewsKarnataka NewsLatest

*ಕೋರ್ಟ್ ಆವರಣದಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೋರ್ಟ್ ಆವರಣದಿಂದಲೇ ಪರಾರಿಯಾಗಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ಗನಿ ಶಬ್ಬೀರ್ ಶೇಕ್ ಬಂಧಿತ ಆರೋಪಿ. ಅಬ್ದುಲ್ ಗನಿ ಶೇಕ್ ವಿರುದ್ಧ ಐದು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯನ್ನು ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು.

Home add -Advt

ಇಂದು ಕೋರ್ಟ್ ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಬೆಳಗಾವಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕೋರ್ಟ್ ಆವರಣದಿಂದಲೇ ಆರೋಪಿ ಎಸ್ಕೇಪ್ ಆಗಿದ್ದ.

ಕೋರ್ಟ್ ನಿಂದಲೇ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೊಪಿಯನ್ನು ನಾಲ್ಕು ಗಂಟೆಗಳಲ್ಲಿ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಕೋರ್ಟ್ ಆವರಣದಿಂದ ತಪ್ಪಿಸಿಕೊಂಡಿದ್ದ ಆರೋಪಿ ಹಿರೇಬಾಗೇವಾಡಿಯ ಮುಸ್ಲಿಂ ಗಲ್ಲಿಯಲ್ಲಿ ಅವಿತು ಕುಳಿತಿದ್ದ.

ಆರೋಪಿ ತಪ್ಪಿಸಿಕೊಂಡಿರುವ ಬಗ್ಗೆ ಬಾಗೇವಾಡಿ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಪಿಎಸ್ ಐ ಅವಿನಾಶ್ ಯರಗೊಪ್ಪ ನೇತೃತ್ವದಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಮುಸ್ಲಿಂ ಗಲ್ಲಿಯಲ್ಲಿ ಅವಿತಿದ್ದ ಆರೋಪಿ ಅಬ್ದುಲ್ ಗನಿ ಶೇಕ್ ಸಿಕ್ಕಿಬಿದ್ದಿದ್ದಾನೆ.


Related Articles

Back to top button