Latest

*ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬ್ಯಾಡ್ ಕೇಸ್ ನ ಗುಡ್ ಲಾಯರ್ ಎಂದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯ ಕಲಾಪದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕಾಲೆಳೆದ ಘಟನೆ ನಡೆದಿದೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಮಾಧುಸ್ವಾಮಿ ಹಾಗೂ ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು. ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ಬಿಟ್ಟು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಬನ್ನಿ ಎಂದು ಸಚಿವ ಮಾಧುಸ್ವಾಮಿ ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಕಾನೂನು ಸಚಿವ ಮಾಧುಸ್ವಾಮಿ ಬಗ್ಗೆ ನನಗೆ ಗೌರವವಿದೆ. ಅವರು ಬ್ಯಾಡ್ ಕೇಸ್ ನ ಗುಡ್ ಲಾಯರ್ ಎಂದು ತಿರುಗೇಟು ನೀಡಿದರು.

ನಾನು ವಕೀಲನಾಗಿದ್ದಾಗ ಓರ್ವ ಹಿರಿಯ ವಕೀಲರಿದ್ದರು. ಯಾವುದೆ ಬ್ಯಾಡ್ ಕೇಸ್ ಬಂದರೂ ಇವರ ಬಳಿ ಕಳುಹಿಸುತ್ತಿದ್ದರು. 25 ಮಧ್ಯಂತರ ಅರ್ಜಿಗಳನ್ನು ಹಾಕುತ್ತಿದ್ದರು. ಜಡ್ಜ್ ಈ ಎಲ್ಲಾ ವಾದಗಳನ್ನು ಕೇಳಿ ತೀರ್ಪು ಕೊಡಬೇಕಿತ್ತು. ಇದು ಮುಗಿಯಲು 15ರಿಂದ 20 ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು. ಅರ್ಜಿ ಹಾಕಿದವನು, ಮಕ್ಕಳು ಸತ್ತು ಮೊಮ್ಮಕ್ಕಳ ಕಾಲಕ್ಕೆ ತೀರ್ಪು ಬರುತ್ತಿತ್ತು. ಹಾಗಾಗಿ ಗೆದ್ದವನು ಸೋತ , ಸೋತವನು ಸತ್ತ ಎಂದು ಹೇಳುತ್ತಿದ್ದೆವು ಎಂದು ಟಾಂಗ್ ನೀಡಿದ್ದಾರೆ.

*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AE*

Home add -Advt

https://pragati.taskdun.com/bescom-aearrestedlokayukta-raid/

Related Articles

Back to top button