ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಇರಲಿ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಪ್ರವಾಹದ ನಂತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆಗಳು ಬಹಳಷ್ಟಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗಗಳು ಹರಡದಂತೆ ತಡೆ ಹಿಡಿಯಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ ಬಸಾಪೂರ ಹೇಳಿದರು.
ಅವರು ಸಮೀಪದ ವಡೇರಹಟ್ಟಿ ಗ್ರಾಮದಲ್ಲಿರುವ ಮುಸಗುಪ್ಪಿ, ಫುಲಗಡ್ಡಿಯ ಗ್ರಾಮಗಳ ನಿರಾಶ್ರಿತರ ಶಿಬಿರದಲ್ಲಿ ಹಮ್ಮಿಕೊಂಡ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ನೀರಿನ ಪ್ರವಾಹದಿಂದ ಕೊಳೆತ ಪದಾರ್ಥಗಳು, ತಗ್ಗು ಪ್ರದೇಶದ ನೀರು ಒಂದೆ ಕಡೆ ನಿಂತು, ಮನೆಯಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿಂತ ನೀರಿನಿಂದಾಗಿ ಹಲವು ಖಾಯಿಲೆಗಳು ಉದ್ಬವಿಸುತ್ತವೆ. ಗಲಿಜು ಪ್ರದೇಶಗಳಿಂದಾಗಿ ಜನ-ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸೂಕ್ತ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆ ಹಾಗೂ ಪಶುವೈದ್ಯಕೀಯದ ಸಹಾಯ ಪಡೆಯುವ ಮೂಲಕ ರೋಗ ಬಾರದಂತೆ ಅಗತ್ಯ ಕ್ರಮ ಕೈಗೋಳ್ಳಬೇಕು. ಸಾಂಕ್ರಾಮಿಕ, ಮಾರನಣಾಂತಿಕ ಖಾಯಿಲೆಗಳ ಸ್ವರೂಪ ಕಂಡು ಬಂದಲ್ಲಿ ಆರೋಗ್ಯ ಇಲಾಖೆಯ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.
ಶಿಕ್ಷಕ ಚಂದ್ರು ಮೊಟೆಪ್ಪಗೋಳ ಮಾತನಾಡಿ, ನೀರಿನ ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ಸಮುದಾಯದ ಅಗತ್ಯ ಸಹಕಾರ ಪಡೆದು ಜನವಸತಿ ಪ್ರದೇಶಗಳನ್ನು ಸ್ವಚ್ಚಗೊಳಿಸಿ ರೋಗ ರುಜುನುಗಳು ಬಾರದಂತೆ ಮುನ್ನಚ್ಚರಿಕೆ ಕ್ರಮ ಅನುಸರಿಸುವುದು ಖಡ್ಡಾಯವಾಗಿದೆ. ನಿಷ್ಕಾಳಜಿ ತೋರದೆ ಜನ ವಸತಿ ಪ್ರದೇಶಗಳನ್ನು ಪುನರ್ ನಿರ್ಮಾಣ ಮಾಡುವಲ್ಲಿ ತಮ್ಮ ಸುಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಾಗಾರದಲ್ಲಿ ತಾಲೂಕು ಆರೋಗ್ಯ ಘಟಕದ ಮೇಲ್ವಿಚಾರಕ ರಾಮಚಂದ್ರ ಸಣ್ಣಕ್ಕಿ, ಎ.ಎಸ್ ತಹಶೀಲ್ದಾರ, ಡಿ.ಕೆ ಪತ್ತಾರ, ಡಿ.ಎಚ್ ಶೇಖ, ಹರೀಶ, ವಿನಾಯಕ ಕಾಮಕರ, ವಾಣಿ ಸಿದ್ದನ್ನವರ, ಲಕ್ಷ್ಮೀ ಗಾಳಿ, ಪಿ.ಎಚ್ ನಾಯಿಕ ಹಾಗೂ ವಡೇರಹಟ್ಟಿ, ಫುಲಗಡ್ಡಿ, ಮುಸಗುಪ್ಪಿ ಗ್ರಾಮಗಳ ಮುಖಂಡರು ನೇರೆ ಸಂತ್ರಸ್ಥರು ಹಾಜರಿದ್ದರು.
ಪರಿಹಾರ ಸಾಮಗ್ರಿ ವಿತರಣೆ
ಮೂಡಲಗಿ: ಘಟಪ್ರಭಾ ನದಿಯ ಪ್ರವಾಹದ ನಿರಾಶ್ರಿತರು ಇರುವ ಪರಿಹಾರ ಕೇಂದ್ರಗಳಿಗೆ ಬೆಂಗಳೂರಿನ ‘ಸೇವಾ’ ಸ್ನೇಹಿತರು ಮತ್ತು ವಿವಿಧ ಸಂಘಟನೆಯುವರು ಭೇಟಿ ನೀಡಿ ಆಹಾರ ಪದಾರ್ಥ, ಬಟ್ಟೆ, ಹೊದಿಕೆಗಳನ್ನು ನೀಡಿದರು.
ಬೆಂಗಳೂರಿನ ಜನಪರ ಸಂಘ, ಐ ವಿಂಗ್ ಪೇಥ್ ಸಂಸ್ಥಾಪಕಿ ಪೂಜಾ ಬಿರಗೆ, ಬೆಂಗಳೂರಿನ ಲೆಟ್‍ಸ್ಟ್ರಾಕ್ ಟೆಕ್ನಾಲಾಜಿ ಸಿಇಒ ವಿಕ್ರಮ ಕುಮಾರ, ಬೆಂಗಳೂರಿನ ಸಿಂಬಸ್ ಟೆಕ್ನಾಲಾಜಿ ರವಿಚಂದ್ರ ಎ.ಜೆ, ಬೆಳಗಾವಿಯ ಗುರು ರೋಡ್‍ಲೈನ್ಸ್, ಮೂಡಲಗಿಯ ಚೈತನ್ಯ ಸಮೂಹ ಸಂಸ್ಥೆ ಇವರ ಸಹಯೋಗದಲ್ಲಿ ಅಂದಾಜು ರೂ. 4 ಲಕ್ಷ ಮೌಲ್ಯದ ವಿವಿಧ ಅವಶ್ಯಕ ಸಾಮಗ್ರಿಗಳನ್ನು ವಿತರಿಸಿದರು.
ದಾನಿಗಳ ಪರವಾಗಿ ಪ್ರೊ. ಎಸ್.ಎಂ. ಕಮದಾಳ ಮತ್ತು ಬಾಲಶೇಖರ ಬಂದಿ ಮಾತನಾಡಿ ‘ಉತ್ತರ ಕರ್ನಾಟಕದ ಜನರ ಕಷ್ಟಗಳಿಗೆ ವಿವಿಧೆಡೆಯಿಂದ ನೆರವು, ಸಹಕಾರ ನೀಡುವ ಮೂಲಕ ಜನರ ಮಾನವೀಯತೆಯನ್ನು ಎತ್ತಿ ತೋರಿಸುತ್ತದೆ’ ಎಂದರು.
ಉತ್ತರ, ದಕ್ಷಿಣ ಎನ್ನುವ ಬೇಧ ಬಿಟ್ಟು ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಮೂಲಕ ಅಖಂಡ ಕರ್ನಾಟಕದ ಏಕತೆಯನ್ನು ಸಾರುವಂತಿದೆ ಎಂದರು.
ರೇವಪ್ಪ ಮಹಾಲಿಂಗಪುರ, ಈರಪ್ಪ ಬೀಸನಕೊಪ್ಪ, ಭೀಮಶಿ ಕುರಬೇಟ, ಪ್ರಕಾಶ ಗಳತಗಿ, ಮಲ್ಲು ಗೋಡಿಗೌಡರ, ಬಾಳಪ್ಪ ತಡಸಿ, ಮೆಹಬೂಬ್ ಬಂಡಿವಾಡ ಮತ್ತು ಸ್ನೇಹಿತರ ಪರಿಶ್ರಮವನ್ನು ಸ್ಮರಿಸಿದರು.
ಪಟಗುಂದಿ, ಮುನ್ಯಾಳ, ಖಾನಟ್ಟಿ, ಧರ್ಮಟ್ಟಿ, ಮೂಡಲಗಿ ಸುತ್ತಮುತ್ತಲಿರುವ ನಿರಾಶ್ರಿತರ 12 ಪರಿಹಾರ ಕೇಂದ್ರಗಳಿಗೆ ರೇಶನ್ ಮತ್ತು ಬಟ್ಟೆ, ಹೊದಿಕೆಗಳ ಕಿಟ್‍ಗಳನ್ನು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ