Kannada NewsKarnataka NewsLatest

ನಾಳೆಯಿಂದಲೇ ಶನಿವಾರ, ಭಾನುವಾರ ಪೂರ್ಣ ದಿನ ಶಾಲೆ

ನಾಳೆಯಿಂದಲೇ ಶನಿವಾರ, ಭಾನುವಾರ ಪೂರ್ಣ ದಿನ ಶಾಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

Home add -Advt

ಪ್ರವಾಹದ ಸಂದರ್ಭದಲ್ಲಿ ಒಂದು ವಾರ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಪೂರ್ಣ ದಿನ ಶಾಲೆಗಳನ್ನು ನಡೆಸುವಂತೆ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಜು.31 ಹಾಗೂ ಆ.6 ರಿಂದ 8ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಭಾನುವಾರ ಶಾಲೆ ನಡೆಸಿ ಬೋಧನಾ ಅವಧಿಯನ್ನು ಸರಿದೂಗಿಸುವಂತೆ ರಜೆ ನೀಡುವ ಸಂದರ್ಭದಲ್ಲೇ ಸೂಚಿಸಲಾಗಿತ್ತು. ಇದೀಗ ಈ ಸಂಬಂಧ ಅಧಿಕೃತವಾಗಿ ಜ್ಞಾಪನಾ ಸುತ್ತೋಲೆಯನ್ನು ಡಿಡಿಪಿಐ ಹೊರಡಿಸಿದ್ದಾರೆ.

ಈ ಆದೇಶ ಆ.17ರಿಂದಲೇ ಜಾರಿಗೆ ಬರಲಿದೆ. ಆ.17, 18, 24, 25, 31, ಸೆ.7, 8, 14 ಹಾಗೂ 21ರಂದು ಪೂರ್ಣ ದಿನ ಶಾಲೆ ನಡೆಸುವಂತೆ ಆದೇಶಿಸಲಾಗಿದೆ. ಸೆ.1 ಭಾನುವಾರ, 15 ಭಾನುವಾರ ಮತ್ತು 22 ಭಾನುವಾರ ಶಾಲೆಗಳಿಲ್ಲ.

Related Articles

Back to top button