Kannada NewsKarnataka NewsLatest

*ಟ್ರಾನ್ಸ್ ಫಾರ್ಮರ್ ಏರಿ ಕುಳಿತು ಆತ್ಮಹತ್ಯೆಗೆ ಶರಣಾದ ಹೆಸ್ಕಾಂ ನೌಕರ*

ಪ್ರಗತಿವಾಹಿನಿ ಸುದ್ದಿ: ಹೆಸ್ಕಾಂ ನೌಕರನೊಬ್ಬ ಟ್ರಾನ್ಸ್ ಫಾರ್ಮರ್ ಏರಿ ಕುಳಿತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

Home add -Advt

ಬಾಗಲಕೋಟೆಯ ನವನಗರ 51ನೇ ಸೆಕ್ಟರ್ ನಲ್ಲಿ ಹೆಸ್ಕಾಂ ನೌಕರ 35 ವರ್ಷದ ಪರಶು ಮಾಸ್ತಿ ಎಂಬಾತ ಟ್ರಾನ್ಸ್ ಫಾರ್ಮರ್ ಹತ್ತಿ, ಅದನ್ನು ಹಿಡಿದುಕುಳಿತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪರಶು ಮಾಸ್ತಿ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ. ಟ್ರಾನ್ಸ್ ಫಾರ್ಮರ್ ಮೇಲೆಯೇ ಪರಶು ಮಾಸ್ತಿ ಶವ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲಿಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button