*ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ*: *ಮಹಾರಾಷ್ಟ್ರದ ಕಾರ್ಖಾನೆಗಳಿಗೂ ಪೈಪೋಟಿ ನೀಡಿದ ಚಿಕ್ಕೋಡಿ ಸಕ್ಕರೆ ಘಟಕ*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ ಗರಿಷ್ಠ 4,200 ರೂಪಾಯಿ ನೀಡಲು ಚಿಕ್ಕೋಡಿ ಭಾಗದ ಸಕ್ಕರೆ ಕಾರ್ಖಾನೆಯೊಂದು ನಿರ್ಧರಿಸಿದೆ. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬಿನ ದರ ಘೋಷಿಸಿದ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೂರು ಹಂತಗಳಲ್ಲಿ ಹಣ ಪಾವತಿ!
ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಈ ದರ ನೀಡಲು ತೀರ್ಮಾನಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ.
ಪಾವತಿಯ ವಿವರ:
ಮೊದಲ ಕಂತು: ಪ್ರತಿ ಟನ್ಗೆ ₹3,800
ಎರಡನೇ ಕಂತು: ಪ್ರತಿ ಟನ್ಗೆ ₹100
ಮೂರನೇ ಕಂತು: ಸಕ್ಕರೆ ದರ ಪ್ರತಿ ಕೆಜಿಗೆ ₹50ಕ್ಕಿಂತ ಹೆಚ್ಚಾದರೆ ಹೆಚ್ಚುವರಿಯಾಗಿ ₹300
ಹೀಗೆ ಷರತ್ತು ಪೂರೈಸಿದಲ್ಲಿ ರೈತರಿಗೆ ಪ್ರತಿ ಟನ್ಗೆ ಒಟ್ಟು ₹4,200 ದೊರೆಯಲಿದೆ.
ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನೀಡುವ ದರದ ಮಾದರಿಯಲ್ಲೇ ಕಬ್ಬಿನ ಬೆಲೆ ನಿಗದಿಪಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಖಾನೆ ತಿಳಿಸಿದೆ.
ರಾಜ್ಯದಲ್ಲೇ ಅತ್ಯಧಿಕ ದರ ಘೋಷಿಸಿರುವುದರಿಂದ ಸುತ್ತಮುತ್ತಲಿನ ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿದೆ. ಈ ನಿರ್ಧಾರ ಇತರೆ ಸಕ್ಕರೆ ಕಾರ್ಖಾನೆಗಳ ಮೇಲೂ ದರ ಹೆಚ್ಚಿಸುವ ಒತ್ತಡ ತರಬಹುದೇ ಎಂಬ ಕುತೂಹಲ ಮೂಡಿದೆ.



