Belagavi NewsBelgaum NewsKannada NewsKarnataka NewsLatest

BREAKING: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಅತ್ತೆಯ ಮೇಲೆ ಸಾರ್ವಜನಿಕವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಪತಿ

ಪ್ರಗತಿವಾಹಿನಿ ಸುದ್ದಿ: ಪತಿ ಬೋರೊಂದು ಯುವತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಪತ್ನಿ, ಪತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿ ಮಹಾಶಯ ತನ್ನ ಪತ್ನಿ ಹಾಗೂ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಪತ್ನಿ ಹಾಗೂ ಪತ್ನಿಯ ತಾಯಿಯನ್ನು ಸಾರ್ವಜನಿಕವಾಗಿ ಎಳೆದು ತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಪತಿ ರಾಕ್ಷಸನಂತೆ ವರ್ತಿಸಿದ್ದಾನೆ.

ಪತ್ನಿ ರಾಜಶ್ರೀ ಹೊಸಮನಿ ಹಾಗೂ ಆಕೆಯ ತಾಯಿ ಮೇಲೆ ಪತಿ ರಾಕೇಶ್ ಹಾಗೂ ಆತನ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಮಹಿಳೆ ಎಂಬುದನ್ನೂ ನೋಡದೇ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಪತಿ ರಾಕೇಶ್ ಪರಸ್ತ್ರೀ ಜೊತೆಗಿರುವುದನ್ನು ಪತ್ನಿ ರಾಜಶ್ರೀ ಪ್ರಶ್ನೆ ಮಾಡಿದ್ದಕ್ಕೆ ಈ ಕೃತ್ಯವೆಸಗಲಾಗಿದೆ.

Home add -Advt

ನಾಲ್ಕು ದಿನಗಲ ಹಿಂದೆ ಇದೇ ವಿಚಾರವಾಗಿ ಪತ್ನಿ ಹಾಗೂ ಪತಿ ನಡುವೆ ಗಲಾಟೆಯಾಗಿತ್ತು. ಇಂದು ರಾಜಶ್ರೀ ಹಾಗೂ ಆಕೆಯ ತಾಯಿ ರಾಕೇಶನ ಪರಸ್ತ್ರೀ ಸಹವಾಸದ ಬಗ್ಗೆ ಮನೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮನ ಬಂದಂತೆ ರಾಜಶ್ರೀ ಹಾಗೂ ಆಕೆಯ ತಾಯಿಯನ್ನು ಹೊಡೆಯಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ರಾಜಶ್ರೀ ಹಾಗೂ ಆಕೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button