Kannada NewsKarnataka NewsLatest
ಹಿರಿಯ ವಾಸ್ತುಶಿಲ್ಪಿ ಸದಾಶಿವ ಅರಬೋಳೆ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಶೆಟ್ಟಿಗಲ್ಲಿಯ ನಿವಾಸಿ, ಹಿರಿಯ ವಾಸ್ತುಶಿಲ್ಪಿ(ಆರ್ಕಿಟೆಕ್ಟ್ ) ಸದಾಶಿವ ಗಂಗಾಧರ ಅರಬೋಳೆ ಬುಧವಾರ ಹೃದಯಾಘಾತದಿಂದ ನಿಧನರಾದರು.
ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಬುಧವಾರ ಮಧ್ಯಾಹ್ನ ಅರಬೋಳೆ ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆಯಿತು.
ಮೃತರ ನಿಧನಕ್ಕೆ ಶೆಟ್ಟಿಗಲ್ಲಿ ರಹವಾಸಿಗಳು, ವಾಸ್ತುಶಿಲ್ಪಿಗಳು ಹಾಗೂ ಇತರ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.




