ಪ್ರಗತಿವಾಹಿನಿ ಸುದ್ದಿ, ಶ್ರೀನಗರ:
ಭಾರತ -ಪಾಕಿಸ್ತಾನ ಗಡಿಯಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಶುಕ್ರವಾರ ಭಾರತದ ಇಬ್ಬರು ಪೊಲೀಸರು ಹಾಗೂ ಇಬ್ಬರು ಯೋಧರನ್ನು ಹೊಡೆದು ಹಾಕಲಾಗಿದೆ.
ಇದರಿಂದಾಗಿ ಪಾಕಿಸ್ತಾನ ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಗಡಿ ಪ್ರದೇಶ ಕುಪ್ವಾರ ಬಳಿ ಪಾಕಿಸ್ತಾನ ಶುಕ್ರವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ನಾಲ್ವರು ಭಾರತೀಯ ಯೋಧರು ಸಾವಿಗೀಡಾಗಿದ್ದಾರೆ.
ಉಗ್ರರ ಜೊತೆಗೆ ಪಾಕಿಸ್ತಾನಿ ಸೇನೆಯೂ ಕಿರಿಕಿರಿ ಉಂಟು ಮಾಡುತ್ತಿದ್ದು, ಭಾರತಕ್ಕೆ ಇದನ್ನು ಹಿಮ್ಮೆಟ್ಟುವುದು ದೊಡ್ಡ ಸವಾಲಾಗಿದೆ.
ಒಂದೆಡೆ ಶಾಂತಿ ಮಾತುಕತೆಯ ಒಲವು ತೋರಿಸಿದಂತೆ ನಟಿಸುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಗಡಿಯಲ್ಲಿ ಪ್ರಚೋದನೆ ಉಂಟು ಮಾಡುತ್ತಿದೆ.