
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಹೊನ್ನಿಹಾಳ- ಬಾಗೇವಾಡಿ ಮಾರ್ಗ ಮಧ್ಯೆ ತರಬೇತಿ ವಿಮಾನವೊಂದು ಬೆಳಗ್ಗೆ ಹೊಲದಲ್ಲೇ ತುರ್ತು ಭೂ ಸ್ಪರ್ಷ ಮಾಡಿದ್ದು ಭಾರೀ ದುರಂತವೊಂದು ತಪ್ಪಿದೆ.

ಸಾಂಬ್ರಾ ವಿಮಾನ ನಿಲ್ದಾಣದಿಂದ ತರಬೇತಿ ನಡೆಸಲಾಗುತ್ತಿದ್ದ ವಿಮಾನ ತಾಂತ್ರಿಕ ತೊಂದರೆಯಿಂದ ಹೊಲದಲ್ಲೇ ಲ್ಯಾಂಡ್ ಆಯಿತು. ಈ ವೇಳೆ ತರಬೇತುದಾರ ಪೈಲಟ್ ಕಾಲಿಗೆ ಪೆಟ್ಟಾಗಿದೆ.
ಘಟನೆ ನಡೆದ ಬೆನ್ನಿಗೇ ಮಾರಿಹಾಳ ಠಾಣೆ ಪೊಲೀಸರು ಹಾಗೂ ವಾಯುಸೇನೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ