Latest

RTI ಕಾರ್ಯಕರ್ತನ ಸಂದೇಹಾಸ್ಪದ ಸಾವು ಪ್ರಕರಣ: ಪಿಎಸ್ ಐ, ಪೇದೆ ಸಸ್ಪೆಂಡ್; ತನಿಖೆ ಸಿಐಡಿಗೆ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಪೊಲೀಸರಿಂದ ತಪ್ಪಿಸಿಕೊಳ್ಳಲು ಸೇತುವೆಯಿಂದ ಜಿಗಿದು ಮೃತಪಟ್ಟಿದ್ದಾಗಿ ಹೇಳಲಾಗಿದ್ದ ಆರ್ ಟಿಐ ಕಾರ್ಯಕರ್ತ ಹರೀಶ ಹಳ್ಳಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರ ದೂರಿನನ್ವಯ ಪಿಎಸ್ ಐ ಹಾಗೂ ಪೇದೆಯನ್ನು ಅಮಾನತು ಮಾಡಲಾಗಿದೆ.

ಇದೇ ವೇಳೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಜಮೀನು ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹರೀಶ ಹಳ್ಳಿ(40) ಅವರನ್ನು ಪೊಲೀಸರು ಬಂಧಿಸಿ ಕರೆತರುವ ಸಂದರ್ಭದಲ್ಲಿ ನಿನ್ನೆ ಬೆಳಗಿನಜಾವ 2.30ರ ಸುಮಾರಿಗೆ ಪೊಲೀಸ್ ಜೀಪ್ ನಿಂದ ತಪ್ಪಿಸಿಕೊಂಡ ಹರೀಶ ಅವರು ತಾಲೂಕಿನ ತೋಳಹುಣಸೆ ಬಳಿ ಸೇತುವೆಯಿಂದ ಜಿಗಿದು ಮೃತಪಟ್ಟಿದ್ದಾಗಿ ಹೇಳಲಾಗಿತ್ತು.

Home add -Advt

ಆದರೆ ಕುಟುಂಬದವರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪಿಎಸ್ ಐ ಹಾಗೂ ಇಬ್ಬರು ಪೇದೆಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

https://pragati.taskdun.com/the-people-of-the-state-have-been-cheated-by-the-congress-on-guarantee-enforcement-former-cm-basavaraja-bommai/
https://pragati.taskdun.com/rain-till-june-2-in-different-parts-of-the-state-yellow-alert-in-many-places/
https://pragati.taskdun.com/demand-for-the-arrest-of-those-who-won-for-pakistan/

Related Articles

Back to top button