Kannada NewsKarnataka NewsLatest

ಬೆಳಗಾವಿ: ಅಂಗಡಿಯಲ್ಲಿ ನಗದು ಕಳುವು; ರಾಜಸ್ಥಾನದ ಮೂವರು ಆರೋಪಿತರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗವಾನ ಗಲ್ಲಿಯಲ್ಲಿನ ಅಂಗಡಿಯೊಂದರಲ್ಲಿ ನಡೆದಿದ್ದ ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಜಸ್ಥಾನ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ಟೋಬರ್ 13ರಂದು ಸದ್ರುದ್ದೀನ್ ಚೌದರಿ ಎಂಬುವವರ ಅಂಗಡಿಯಿಂದ 4 ಲಕ್ಷ ರೂ. ನಗದು ಕಳುವು ಮಾಡಲಾಗಿತ್ತು. ಈ ಸಂಬಂಧ ಸದ್ರುದ್ದೀನ್ ಅವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ರಾಜಸ್ಥಾನ ಪೊಲೀಸರ ಸಹಾಯದಿಂದ ಮೂವರೂ ಆರೋಪಿತರನ್ನು ಪತ್ತೆ ಮಾಡಿ ಅವರನ್ನು ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆ ಉಪವಿಭಾಗದ ಎಸಿಪಿ ಎನ್.ವಿ. ಬರಮನಿ ನೇತೃತ್ವದಲ್ಲಿ ಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ ಐಗಳಾದ ಹುಸೇನ್ ಕೆರೂರ, ಶಶಿಕುಮಾರ ಕುರಳೆ, ಸಿಎಚ್ ಸಿ ಲಕ್ಷ್ಮಣ ಎಸ್. ಕಡೋಲ್ಕರ, ಸಿಪಿಸಿಗಳಾದ ಶಂಕರ ಕುಗಟೊಳ್ಳಿ, ಖಾದರಸಾಬ್ ಖಾನಮ್ಮನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Home add -Advt

Breaking News: ಬೆಳಗಾವಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ, ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button