Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿ ಪೊಲೀಸರಿಂದ ಅಕ್ರಮ ಸಾರಾಯಿ ಅಡ್ಡೆ ಮೇಲೆ ದಾಳಿ; ಆರೋಪಿ ಪರಾರಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಗ್ಯಾಂಗ್‌ವಾಡಿಯ ಸ್ಪಂದನಾ ಆಸ್ಪತ್ರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿರುವ ಮಾಳಮಾರುತಿ ಠಾಣೆಯ ಪೊಲೀಸರು ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ.

ಡಾನ್ ಮೇತಾಜಿ ಚೌಗಲೆ ಈ ಪ್ರಕರಣದ ಆರೋಪಿಯಾಗಿದ್ದು, ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ.‌ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ವಿವಿಧ ಕಂಪನಿಯ ಸರಾಯಿ ಮಾರಾಟ ಮಾಡುತ್ತಿದ್ದಾಗ ಮಾಳಮಾರುತಿ ಠಾಣೆಯ ಎಎಸ್‌ಐ ಎಂ ಯು ಹಿರೇಮಠ. ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ಬಳಿ ಇದ್ದ ಬ್ಯಾಗ್‌ಪೈಪರ, ಓಲ್ಬಮಂಕ್, ಓರಿಯನ್, ಇಂಪಿರಿಯಲ್ ಬ್ಲೂ ಹೀಗೆ ವಿವಿಧ ಕಂಪನಿಯ 4790 ರೂ. ಮೌಲ್ಯದ ಅಕ್ರಮ ಸರಾಯಿ ಮತ್ತು 5000 ರೂ. ಮೌಲ್ಯಸ ಮೋಬೈಲ್, ಹೀಗೆ ಒಟ್ಟು 9790 ರೂ. ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಂಡು ಆರೋಪಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 62/2026 ಕಲಂ.32,34 ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಪತ್ತೆ ಹಾಗೂ ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

Home add -Advt

Related Articles

Back to top button